ಮಂಗಳವಾರ, ಜನವರಿ 28, 2020
29 °C

ಪಟೇಲ್‌ ಪ್ರತಿಮೆ ಸ್ಥಾಪನೆಗಾಗಿ ಹೊಸಕೋಟೆಯಲ್ಲಿ ‘ಏಕತಾ ಓಟ’

'ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಕೋಟೆ: ಗುಜರಾತ್‌ನಲ್ಲಿ ವಿಶ್ವದ ಅತಿ ಎತ್ತರದ ಸರ್ದಾರ್ ವಲ್ಲಭ­ಭಾಯಿ ಪಟೇಲ್‌ ಅವರ ಪ್ರತಿಮೆ ಸ್ಥಾಪನೆಗಾಗಿ ಕಬ್ಬಿಣ ಮತ್ತು ಮಣ್ಣು ಸಂಗ್ರಹಿಸುವುದಕ್ಕಾಗಿ ಹೊಸ­ಕೋಟೆ­ಯಲ್ಲಿ ಭಾನುವಾರ ಏರ್ಪಡಿಸಿದ್ದ ಜಿಲ್ಲಾಮಟ್ಟದ ಲೋಹ ಸಂಗ್ರಹ ಏಕತಾ ಓಟಕ್ಕೆ ಮಾಜಿ ಸಚಿವ ಬಿ.ಎನ್.ಬಚ್ಚೇಗೌಡ ಚಾಲನೆ ನೀಡಿದರು.ತಾಲ್ಲೂಕಿನ ಎಲ್ಲಾ 300 ಹಳ್ಳಿಗಳಿಂದ ಕಬ್ಬಿಣ ಸಂಗ್ರಹಿಸಲಾಗು­ವುದು. ಅದರಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೂ ಈ ಕಾರ್ಯ ನಡೆಯಲಿದೆ ಎಂದು ಬಚ್ಚೇಗೌಡ ಹೇಳಿದರು.ಚನ್ನಬೈರೇಗೌಡ ಕ್ರೀಡಾಂಗಣದಿಂದ ಹೊರಟ ಏಕತಾ ಓಟ ಪಟ್ಟಣದ ಮುಖ್ಯ ಬೀದಿಗಳಲ್ಲಿ ಸಂಚರಿಸಿತು. ಜಿಲ್ಲೆಯ ನಾಲ್ಕೂ ತಾಲ್ಲೂಕುಗಳಿಂದ ಬಂದ ಕಾರ್ಯಕರ್ತರು ಅಭಿಮಾನಿಗಳು ಏಕತಾ ಓಟದಲ್ಲಿ ಭಾಗವಹಿಸಿದ್ದರು.ಜಿ.ಪಂ.ಅಧ್ಯಕ್ಷ ತಿರುವರಂಗ ನಾರಾಯಣಸ್ವಾಮಿ, ಜಿಲ್ಲಾ ಬಿಜೆಪಿ ಘಟಕದ ಆಧ್ಯಕ್ಷ ಬಿ.ಸಿ.ನಾರಾಯಣಸ್ವಾಮಿ. ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಮುನಿಯಪ್ಪ, ಸಂಚಾಲಕ ಬಿ.ಎಂ.ನಾರಾಯಣಸ್ವಾಮಿ ಮತ್ತಿತರರು ಓಟದಲ್ಲಿ ಭಾಗವಹಿಸಿದ್ದರು.ಈ ವೇಳೆ ಕಾರ್ಯಕರ್ತರು ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಪರವಾಗಿ ಘೋಷಣೆಗಳನ್ನು ಕೂಗಿದರು.

ಪ್ರತಿಕ್ರಿಯಿಸಿ (+)