ಮಂಗಳವಾರ, ಮೇ 18, 2021
28 °C

ಪಟ್ಟಣಕ್ಕೆ ಕಲುಷಿತ ನೀರು ಪೂರೈಕೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಳಂದೂರು: ಪಟ್ಟಣದ ಜನತೆಯ ಬಹು ವರ್ಷಗಳ ಬೇಡಿಕೆಯಾದ ಕಾವೇರಿ ಕುಡಿಯುವ ನೀರಿನ ಕಾಮಗಾರಿ ಅರ್ಧಂಬರ್ಧ ನಡೆದಿದೆ.  ಅಪೂರ್ಣ  ಕಾಮಗಾರಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಂದ ಉದ್ಘಾಟನೆಯೂ ಆಗಿದೆ. ಪ್ರತಿದಿನ ಬಡಾವಣೆಗಳಿಗೆ ಸರಬ ರಾಜು ಮಾಡುತ್ತಿರುವ  ಕಾವೇರಿ ನೀರು  ಕೆಂಪು ಬಣ್ಣದಿಂದ ಕೂಡಿದ್ದು, ಇದರ ಜೊತೆ ಕಸ ಕಡ್ಡಿ ಮರಳು, ಕೆಲವೊಮ್ಮೆ ಹುಳುಗಳೂ ಕೂಡ ಬರುತ್ತಿದೆ.ಕರ್ನಾಟಕ ಜಲಮಂಡಳಿ ಹಾಗೂ ಯಳಂದೂರು ಪಟ್ಟಣ ಪಂಚಾಯಿತಿ ವತಿಯಿಂದ ಕೊಳ್ಳೇಗಾಲ ತಾಲ್ಲೂಕಿನ ಮುಳ್ಳೂರು ಗ್ರಾಮದ ಬಳಿ ನೀರೆತ್ತುವ ಪಂಪ್ ಅಳವಡಿಸಲಾಗಿದೆ. ಉತ್ತಂಬಳ್ಳಿ ಗ್ರಾಮದಲ್ಲಿ ಜಲ ಶುದ್ಧಿಕರಣ ಘಟಕವನ್ನೂ ನಿರ್ಮಿಸಲಾಗಿದೆ. ಆದರೆ ಇದರ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ.ಶುದ್ಧೀಕರಣ ಘಟಕದಲ್ಲಿ ಸುತ್ತುಗೋಡೆ ಹಾಕಿಲ್ಲ. ಅಕ್ಕಪಕ್ಕದಲ್ಲಿ ಹೊಲ-ಗದ್ದೆಗಳಿದ್ದು ಜಾನುವಾರುಗಳು ಮೇಯಲು ಈ ಸ್ಥಳಕ್ಕೆ ಬರುತ್ತವೆ. ವ್ಯವ ಸಾಯ ಮಾಡುವ ರೈತರು ಹಾಗೂ ಸಾರ್ವ ಜನಿಕರು ಇಲ್ಲೇ ತಿರು ಗಾ ಡುತ್ತಾರೆ.ಇದ ರಿಂದ ಕಲ್ಮಶ ನೀರಿಗೆ ಸೇರುವ ಸಾಧ್ಯತೆ ಹೆಚ್ಚಾ ಗಿದೆ. ಹೀಗಾಗಿ ಇಲ್ಲಿಂದ ಪಟ್ಟಣಕ್ಕೆ ನೀರು ಪೂರೈಕೆ ಯಾಗುವ ಸಂದರ್ಭದಲ್ಲಿ ಏನಾದರೂ ಅನಾಹುತ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ.ಹುಳಗಳೂ ಬಂದಿವೆ:`ಪಟ್ಟಣದ ಬಳೇಪೇಟೆ ಶಾಂತರಾಜು ಮನೆಯ ನಲ್ಲಿ ನೀರಿನಲ್ಲಿ ಹುಳಗಳೂ ಬಂದಿವೆ. ಈ ನೀರು ಕುಡಿಯಲು ಯೋಗ್ಯವಾಗಿಲ್ಲ. ನೀರನ್ನು ಸಂಗ್ರಹಿಸಿಟ್ಟರೆ ತಳದಲ್ಲಿ ಮರಳು ನಿಲ್ಲುತ್ತದೆ. ಇದಕ್ಕೆ ಬ್ಲೀಚಿಂಗ್ ಪೌಡರ್ ಹಾಕಿ ಪೂರೈಕೆ ಮಾಡಲಾಗುತ್ತಿದ್ದರೂ ಇದನ್ನು ಬಳಸಲು ಹೆದರಿಕೆಯಾಗುತ್ತದೆ~ ಎಂದು ಸಾರ್ವಜನಿಕರು ಆರೋಪಿದ್ದಾರೆ.`ಕರ್ನಾಟಕ ಜಲ ಮಂಡಳಿ ಹಲವು ವರ್ಷಗಳಿಂದ ಕಾವೇರಿ ಕುಡಿಯುವ ನೀರು ಪೂರೈಸುವ ಕಾಮಗಾರಿ ನಡೆಯುತ್ತಿದೆ.  ಕೋಟ್ಯಂತರ ರೂ. ವೆಚ್ಚದಲ್ಲಿ ತಾಲ್ಲೂಕಿನ ಕೆಲವು ಹಳ್ಳಿಗಳಿಗೆ ಹಾಗೂ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಉದ್ಧೇಶದಿಂದ ಇದನ್ನು ಆರಂಭಿಸಲಾಗಿದೆ. ಆದರೆ ಪಟ್ಟಣದ 11 ವಾರ್ಡ್‌ಗಳಲ್ಲಿ ಕೇವಲ 6 ವಾರ್ಡ್‌ಗಳಿಗೆ ಮಾತ್ರ ಪೈಪ್ ಅಳವಡಿಸಲಾಗಿದೆ. ನೀರು ಕುಡಿಯಲು ಯೋಗ್ಯವಾಗಿಲ್ಲ. ಶುದ್ಧೀಕರಣ ಘಟಕದ ಕಾಮಗಾರಿಯೂ ಪೂರ್ಣಗೊಂಡಿಲ್ಲ. ಪಟ್ಟಣ ಪಂಚಾಯಿತಿ ಇದನ್ನು ಸ್ವಾಧೀನಕ್ಕೆ ತೆಗೆದುಕೊಂಡಿಲ್ಲ. ಆದ್ದರಿಂದ ಕಾಮಗಾರಿ ಮುಗಿಯದೇ ಇದಕ್ಕೆ ಅವಕಾಶ ಕೊಡುವುದಿಲ್ಲ~ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ  ಮಹದೇವಸ್ವಾಮಿ `ಪ್ರಜಾವಾಣಿ~ಗೆ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.