ಪಟ್ಟಣದ ಶುಚಿತ್ವಕ್ಕೆ ಎಲ್ಲರ ಸಹಕಾರ ಅಗತ್ಯ

7
ಪೌರಕಾರ್ಮಿಕರಿಗೆ ಹೃದಯಸ್ಪರ್ಶಿ ಸನ್ಮಾನ

ಪಟ್ಟಣದ ಶುಚಿತ್ವಕ್ಕೆ ಎಲ್ಲರ ಸಹಕಾರ ಅಗತ್ಯ

Published:
Updated:

ಗೌರಿಬಿದನೂರು: ಪಟ್ಟಣವನ್ನು ಶುಚಿ­ಯಾಗಿಟ್ಟು­ಕೊಳ್ಳುವುದು ಮತ್ತು ಪರಿಸರಕ್ಕೆ ಧಕ್ಕೆಯಾಗದಂತೆ ನೋಡಿ­ಕೊಳ್ಳು­ವುದು ಬರೀ ಪುರಸಭೆ ಕಾರ್ಮಿ­ಕರ ಕರ್ತವ್ಯವಲ್ಲ, ಪಟ್ಟಣದಲ್ಲಿ ವಾಸಿ­ಸುವ ಪ್ರತಿಯೊಬ್ಬರ ಕರ್ತವ್ಯ ಎಂದು ತಹಶೀಲ್ದಾರ್‌ ಡಾ. ಎನ್‌.ಭಾಸ್ಕರ್‌ ತಿಳಿಸಿದರು.ಪೌರಕಾರ್ಮಿಕರ ದಿನಾಚರಣೆ ಅಂಗ­ವಾಗಿ ಪಟ್ಟಣದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ಮನೆಯನ್ನು ಎಷ್ಟು ಶುಚಿಯಾಗಿ ಇಟ್ಟುಕೊಳ್ಳುತ್ತಿರೋ, ಅಷ್ಟೇ ಶುದ್ಧವಾಗಿ ಇಡೀ ಪಟ್ಟಣ ಇಟ್ಟುಕೊಳ್ಳಬೇಕು. ಆಗ ಮಾತ್ರವೇ ಉತ್ತಮ ವಾತಾವರಣ ನಿರ್ಮಾಣವಾಗುತ್ತದೆ ಎಂದರು.ಸದಾ ಗಲೀಜಿನಲ್ಲಿಯೇ ಕೆಲಸ ಮಾಡುವ ಪೌರಕಾರ್ಮಿಕರು ಅವರು ಹಲವು ಬಾರಿ ಅನಾ­ರೋಗ್ಯಕ್ಕೀಡಾಗುತ್ತಾರೆ.  ಆರೋಗ್ಯ ರಕ್ಷಣೆಗಾಗಿ ಪ್ರತಿ ತಿಂಗಳು ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಏರ್ಪಡಿಸಬೇಕು ಎಂದು ಒತ್ತಿ ಹೇಳಿದರು.ಪುರಸಭೆ ಸದಸ್ಯ ಜಿ.ಬಾಲಾಜಿ ಮಾತನಾಡಿದರು. ಉತ್ತಮ ಸೇವೆ ಸಲ್ಲಿಸಿದ ಪುರಸಭೆ ಕಾರ್ಮಿಕರನ್ನು ಸನ್ಮಾನಿಸಲಾಯಿತು.

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪೌರಕಾರ್ಮಿಕರ ಮರವಣಿಗೆ ನಡೆಯಿತು.ಪುರಸಭೆ ಮುಖ್ಯಾಧಿಕಾರಿ ಹನು­ಮಂತೇಗೌಡ, ಪುರಸಭೆ ಸದಸ್ಯರಾದ ವಿ.ರಮೇಶ್‌,ಅನಂತ್‌ರಾಜು, ಮೋಹನ್‌,ಚಿದಾನಂದಗುಪ್ತ, ಪುರಸಭೆ ಪೌರಕಾರ್ಮಿಕರ ಜಿಲ್ಲಾ ಘಟಕದ ಅಧ್ಯಕ್ಷ ಮುರಳಿ, ತಾಲ್ಲೂಕು ಘಟಕದ ಅಧ್ಯಕ್ಷ ನಾರಾಯಣಸ್ವಾಮಿ, ಪುರಸಭೆ ಎಂಜಿನಿಯರ್‌ಗಳಾದ ತಿಮ್ಮರಾಜು, ತ್ಯಾಗರಾಜ್‌, ಕಚೇರಿ ಸಿಬ್ಬಂದಿ ಅಮರ­ನಾರಾಯಣ ಉಪಸ್ಥಿತರಿದ್ದರು.ಸಾಲ ಪಾವತಿಗೆ ಮನವಿ

ಬಂಗಾರಪೇಟೆ:
ಸಕಾಲಕ್ಕೆ ಸಾಲ ಪಾವತಿಸುವ ಮೂಲಕ ರೈತರು ಆರ್ಥಿಕ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಹುನ್ಕುಂದ ವೆಂಕಟೇಶ್ ಹೇಳಿದರು. ಪಟ್ಟಣದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry