ಪಟ್ಟಣ ಅಭಿವೃದ್ಧಿಗೆ ಪಕ್ಷಾತೀತವಾಗಿ ಶ್ರಮಿಸಿ

7

ಪಟ್ಟಣ ಅಭಿವೃದ್ಧಿಗೆ ಪಕ್ಷಾತೀತವಾಗಿ ಶ್ರಮಿಸಿ

Published:
Updated:

ಹುಮನಾಬಾದ್: ಅಭಿವೃದ್ಧಿ ವಿಷಯದಲ್ಲಿ ಪುರಸಭೆಯ ಸಮಸ್ತ ಸದಸ್ಯರು ಪಕ್ಷಾತೀತ ಪ್ರಾಮಾಣಿಕ ಶ್ರಮಿಸಬೇಕು ಎಂದು ಜಿಲ್ಲಾ  ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಗುರುಪಾದಪ್ಪ ನಾಗಮಾರಪಳ್ಳಿ ಸಲಹೆ ನೀಡಿದರು.

ಪುರಸಭೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಸ್ಥಾಯಿ ಸಮಿತಿ ಅಧ್ಯಕ್ಷ ಕಚೇರಿ ಉದ್ಘಾಟನೆ ನೆರವೇರಿಸಿ, ಅವರು ಮಾತನಾಡಿದರು.ನಗರ ಸ್ವಚ್ಛತೆ, ಕುಡಿಯುವ ನೀರು, ವಿದ್ಯುತ್ ಮೊದಲಾದವುಗಳ ಬಗ್ಗೆ ಎಲ್ಲ ಸದಸ್ಯರು ಮತ್ತು ಸಿಬ್ಬಂದಿಯರು ವಿಶೇಷ ಜಾಗೃತಿ ವಹಿಸಬೇಕು. ನಗರ ಅಭಿವೃದ್ಧಿ ವಿಷಯ ಬಂದಾಗ ಕ್ಷೇತ್ರದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಜನತೆ ಕೊಟ್ಟ ಅವಕಾಶದ ಸದ್ಬಳಕೆ ಮಾಡಿಕೊಳ್ಳುವ ಮೂಲಕ ವಿಶ್ವಾಸ ಉಳಿಸಿಕೊಳ್ಳಲು ಶಕ್ತಿಮೀರಿ ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಶಾಸಕ ರಾಜಶೇಖರ ಪಾಟೀಲ ಮಾತನಾಡಿ, ಒಂದು ವರ್ಷ ಹಿಂದೆಯೇ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಗೊಂಡ ಅಬ್ದುಲ್ ರೆಹೆಮಾನ್ ಗೋರೆಮಿಯ್ಯ ಅವರ ಕಚೇರಿ ಉದ್ಘಾಟನೆ ಕಾರಣಾಂತರ ವಿಳಂಬಗೊಂಡಿತು ಈಗ ಇರುವ ಅವಧಿಯಲ್ಲಿ ಗೋರೆಮಿಯ್ಯ ಅವರು ಉತ್ತಮ ಕಾರ್ಯಗಳ ಮೂಲಕ ನಾಗರಿಕರ ಪ್ರೀತಿಗೆ ಪಾತ್ರರಾಗಬೇಕು ಎಂದು ಸಲಹೆ ನೀಡಿದರು.ಜಾತ್ಯತೀತ ಜನತಾ ದಳ ಜಿಲ್ಲಾ ಅಧ್ಯಕ್ಷ ನಸ್ಸೀಮ ಪಟೇಲ ಗೋರೆಮಿಯ್ಯ ಅವರಿಗೆ ಶುಭ ಹಾರೈಸಿ, ಉತ್ತಮ ಕೆಲಸಗಳಿಗೆ ಯಾವತ್ತೂ ಸಹಕಾರ ನೀಡುವುದಾಗಿ ತಿಳಿಸಿದರು.ಪುರಸಭೆ ಅಧ್ಯಕ್ಷ ಪದ್ಮಾವತಿ ಶಿವಾಜಿರಾವ ಮಚಕೂರಿ, ಉಪಾಧ್ಯಕ್ಷ ಎಸ್.ಎ.ಬಾಸೀತ್ ಓಮರ್, ಸದಸ್ಯರಾದ ತನುಜಾ ಧುಮಾಳೆ, ಆಜಮ್ ಮತೀನ್, ಮಲ್ಲಿಕಾರ್ಜುನ ಸೀಗಿ, ವಿನಾಯಕ ಯಾದವ್, ವಿಜಯಕುಮಾರ ದುರ್ಗದ್, ಬಾಬುರಾವ ಜಾನವೀರ್, ಎಂ.ಡಿ.ಆಜಮ್, ವೆಂಕಮ್ಮ, ಗಣ್ಯರಾದ ಅಶೋಕರಾಜ ಕಟ್ಟಿ, ಪ್ರಭು ತಾಳಮಡಗಿ, ಮಲ್ಲಿಕಾರ್ಜುನ ತಾಂಡೂರ್, ಜೆ.ಡಿ.ಎಸ್ ಮುಖಂಡ ಮಹ್ಮದ್ ಎಹೆಜಾಜ್, ಪುರಸಭೆ ಮುಖ್ಯಾಧಿಕಾರಿ ಸತೀಶ ಗುಡ್ಡೆ ಹಾಗೂ ಸಿಬ್ಬಂದಿ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry