ಮಂಗಳವಾರ, ಏಪ್ರಿಲ್ 13, 2021
29 °C

ಪಟ್ನಾಗೆ ಇಂದು ವಿಶೇಷ ರೈಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಜಾ ದಿನದ ನೂಕು -ನುಗ್ಗಲು ನಿವಾರಿಸಲು ರೈಲ್ವೆ ಇಲಾಖೆ ಬೆಂಗಳೂರು -ಪಟ್ನಾ- ಬೆಂಗಳೂರು (ನಂ. 06529/ 06530) ವಿಶೇಷ ರೈಲನ್ನು ಓಡಿಸಲು ನಿರ್ಧರಿಸಿದೆ.ಬೆಂಗಳೂರಿನಿಂದ ನ. 14ರಂದು ಬೆಳಿಗ್ಗೆ 10.10ಕ್ಕೆ ಹೊರಟು 16ರಂದು ಬೆಳಿಗ್ಗೆ 9.50ಕ್ಕೆ ಪಟ್ನಾ ತಲುಪಲಿರುವ ಈ ರೈಲು, ಪಟ್ನಾದಿಂದ 16ರಂದು ರಾತ್ರಿ 8.10ಕ್ಕೆ ಹೊರಟು 18ರಂದು ರಾತ್ರಿ 9ಕ್ಕೆ ಬೆಂಗಳೂರು ತಲುಪಲಿದೆ.20 ದ್ವಿತೀಯ ದರ್ಜೆ ಬೋಗಿಗಳನ್ನಷ್ಟೇ ಹೊಂದಿದ ಈ ರೈಲಿಗೆ ಸೀಟು ಕಾದಿರಿಸುವ ಸೌಲಭ್ಯ ಇರುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.