ಶುಕ್ರವಾರ, ಅಕ್ಟೋಬರ್ 18, 2019
28 °C

ಪಟ್ನಾದಲ್ಲಿ ಸಿಪಿಐ ಸಮ್ಮೇಳನ

Published:
Updated:

ಬೆಂಗಳೂರು: ಭಾರತ ಕಮ್ಯುನಿಸ್ಟ್ ಪಕ್ಷದ (ಸಿಪಿಐ) 21ನೇ ರಾಜ್ಯ ಸಮ್ಮೇಳನ ಇಲ್ಲಿ ಗುರುವಾರದಿಂದ ಶನಿವಾರದವರೆಗೆ ನಡೆಯಲಿದೆ. ಬಿಹಾರದ ರಾಜಧಾನಿ ಪಟ್ನಾದಲ್ಲಿ ಮಾರ್ಚ್ 27ರಿಂದ ನಡೆಯಲಿರುವ ಪಕ್ಷದ ರಾಷ್ಟ್ರೀಯ ಮಹಾ ಅಧಿವೇಶನಕ್ಕೆ ಪೂರ್ವಭಾವಿಯಾಗಿ ರಾಜ್ಯ ಸಮ್ಮೇಳನವನ್ನು ಆಯೋಜಿಸಲಾಗಿದೆ.ರಾಜ್ಯ ಸಮ್ಮೇಳನದಲ್ಲಿ ಸಿಪಿಐ ರಾಷ್ಟ್ರೀಯ ಉಪ ಪ್ರಧಾನ ಕಾರ್ಯದರ್ಶಿ ಸುಧಾಕರ ರೆಡ್ಡಿ, ರಾಜ್ಯಸಭಾ ಸದಸ್ಯ ಡಿ. ರಾಜಾ, ಮಾಜಿ ಶಾಸಕ ಎಂ.ಸಿ. ನರಸಿಂಹನ್, ಪಕ್ಷದ ಮುಖಂಡರಾದ ಎಚ್.ವಿ. ಅನಂತಸುಬ್ಬರಾವ್ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Post Comments (+)