ಗುರುವಾರ , ಮೇ 26, 2022
30 °C

ಪಠ್ಯಪುಸ್ತಕ ನೀತಿ, ದೇವರಿಗೇ ಪ್ರೀತಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಐದು ಮತ್ತು ಎಂಟನೇ ತರಗತಿಯ ಪಠ್ಯ ಪುಸ್ತಕಗಳು ಬದಲಾಗಿವೆ. ಕೇಂದ್ರೀಯ ಪಠ್ಯ ಕ್ರಮದ ಅನುಸಾರವಾಗಿ ಪಠ್ಯಗಳು ಸಿದ್ಧಗೊಂಡಿವೆ.ಆದರೆ ಎಲ್ಲಾ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ತಲುಪಿಲ್ಲ.ವರ್ಗಾವಣೆ ಮತ್ತಿತರ ಕಾರಣಗಳಿಂದ ತರಗತಿಯ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಏರುಪೇರಾಗಿದೆ. ಮಾಧ್ಯಮವೂ ಬದಲಾಗಿದೆ. ಉಚಿತ ಪಠ್ಯಪುಸ್ತಕದ ಪುಷ್ಕಳ ಭೋಜನ ಸಿಕ್ಕಿರುವವರು ತುಂಬಿದ ಹೊಟ್ಟೆಯ ಮೇಲೆ ಕೈಯನ್ನು ಸವರಿಕೊಳ್ಳುತ್ತಿದ್ದಾರೆ. ಆದರೆ ಸಿಗದೇ ಇರುವವರ ಹೊಟ್ಟೆಯ ಮೇಲೆ ಕೇವಲ ಒದ್ದೆ ಬಟ್ಟೆ! ಸಿಕ್ಕಿರುವವರನ್ನು ಕಾಡಿ, ಬೇಡಿ ಎಲ್ಲಾ ವಿಷಯದ ಮೊದಲ ಪಾಠದ ಪುಟಗಳನ್ನು ಜೆರಾಕ್ಸ್ ಮಾಡಿಸಿ ಕೊಳ್ಳುತ್ತಿದ್ದಾರೆ.ಒಂದು ಪುಟಕ್ಕೆ ಕೇವಲ ಒಂದು ರೂಪಾಯಿ ಅಷ್ಟೆ! ಜೆರಾಕ್ಸ್ ಕೇಂದ್ರಗಳಿಗೆ ಬಂಪರ್ ಆದಾಯದ ಸುಗ್ಗಿಯೋ ಸುಗ್ಗಿ. ಉಚಿತ ಪಠ್ಯಪುಸ್ತಕ ಇಲ್ಲದವರಿಗೆ ಪಂಗನಾಮ!

ಶಾಲೆಗೆ ತಳಿರು ತೋರಣ ಕಟ್ಟಿ, `ಮರಳಿ ಬಾ ಶಾಲೆಗೆ~ ಎಂದು ಕರೆಸಿಕೊಂಡು ಬಂದ ಮಕ್ಕಳಿಗೆ ಮತ್ತು ಅವರ ಪಾಲಕರಿಗೆ (ಇವರ ಸಂಖ್ಯೆ ಕಡಿಮೆಯೇ ಇರಬಹುದು) ಆಗುವ ಮಾನಸಿಕ ಆಘಾತದ ಬಗ್ಗೆ ಸರ್ಕಾರ ಸೂಕ್ಷ್ಮ ಸಂವೇದನೆಯನ್ನು ಕಳೆದುಕೊಂಡಿದೆ.

ಸರ್ಕಾರದ ಪಠ್ಯಪುಸ್ತಕದ ನೀತಿ, ದೇವರಿಗೆ ಪ್ರೀತಿ! ಶೈಕ್ಷಣಿಕ ವರ್ಷದ ಶುಭಾರಂಭಕ್ಕೆ ಉಘೇ, ಉಘೇ!ಪಠ್ಯ ಪುಸ್ತಕ ಕಳೆದುಕೊಂಡ, ಹರಿದುಕೊಂಡ ವಿದ್ಯಾರ್ಥಿಗಳು ಮತ್ತೆ ಅದನ್ನು ಕೊಳ್ಳುವಂತೆ ಅಥವಾ ಪಾಲಕರೂ ಅಭ್ಯಾಸ ಮಾಡಿ ಮಕ್ಕಳಿಗೆ ಹೇಳಿಕೊಡಲು ಬೇಕಾದರೆ ಕೊಳ್ಳಲು ಲಭ್ಯವಾಗುವಂತೆ ಹೆಚ್ಚುವರಿ ಪಠ್ಯ ಪುಸ್ತಕಗಳನ್ನು ಸಕಾಲದಲ್ಲಿ ಮುದ್ರಿಸಲು ಸರ್ಕಾರಕ್ಕೇನು ಕಷ್ಟ? 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.