ಪಠ್ಯೇತರ ಚಟುವಟಿಕೆ ಅಗತ್ಯ

7

ಪಠ್ಯೇತರ ಚಟುವಟಿಕೆ ಅಗತ್ಯ

Published:
Updated:

ರಾಮನಗರ: ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ನೇತಾಜಿ ಪಾಪ್ಯುಲರ್ ವಿದ್ಯಾ ಸಂಸ್ಥೆಯ ಅಧ್ಯಕ್ಷ ಕೆ.ಗುರುವೇಗೌಡ ಹೇಳಿದರು.ನೇತಾಜಿ ಪಾಪ್ಯುಲರ್ ವಿದ್ಯಾಸಂಸ್ಥೆಯ ಆವರಣದಲ್ಲಿ ಮಂಗಳವಾರ ನಡೆದ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಕೆ.ರಾಜು, ಮಕ್ಕಳ ಪ್ರತಿಭೆಯನ್ನು ಪ್ರದರ್ಶಿಸಲು ವಾರ್ಷಿಕೋತ್ಸವ ಸಮಾರಂಭಗಳು ಸಹಾಯಕವಾಗುತ್ತವೆ ಎಂದರು.ಶಿಕ್ಷಣ ಮತ್ತು ಶಿಕ್ಷಣ ಸಂಸ್ಥೆಗಳ ಪ್ರಕೋಶ್ಠದ ರಾಜ್ಯ ಸಂಚಾಲಕ ಎಂ. ನೀಲಯ್ಯ ಮಾತನಾಡಿ, ಹೆತ್ತ ತಾಯಿ ಮತ್ತು ತಾಯ್ನೆಲಕ್ಕೆ ಗೌರವ ಕೊಡುವುದನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು ಎಂದರು.ಕಾಂಗ್ರೆಸ್ ಮುಖಂಡ ಮರಿದೇವರು ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳಿಗೆ ಕಲಿಸಿಕೊಟ್ಟ ಸದ್ಗುಣಗಳನ್ನು ಪೋಷಿಸುವ ಜವಾಬ್ದಾರಿ ಪೋಷಕರದ್ದಾಗಿರುತ್ತದೆ ಎಂದು ತಿಳಿಸಿದರು. ಪಠ್ಯಪುಸ್ತಕ ಸಂಘದ ಉಪ ನಿರ್ದೇಶಕ (ಆಡಳಿತ) ನಾಗೇಂದ್ರ ಕುಮಾರ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಪಿ.ಮಾದೇಗೌಡ ಮಾತನಾಡಿದರು.

ಶಾಲಾ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry