ಗುರುವಾರ , ಏಪ್ರಿಲ್ 15, 2021
26 °C

ಪಠ್ಯೇತರ ಚಟುವಟಿಕೆ ಬೌದ್ಧಿಕ ಪ್ರಗತಿಗೆ ಪೂರಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಲೇಬೆನ್ನೂರು: ಪ್ರಸಕ್ತ ದಿನ ಮಕ್ಕಳು ಟಿವಿ ಮಾಧ್ಯಮ ನಕಲು ಮಾಡುತ್ತಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಎಚ್. ಶಿವರುದ್ರಪ್ಪ ಕಳವಳ ವ್ಯಕ್ತಪಡಿಸಿದರು.

ಸಮೀಪದ ಕುಂಬಳೂರಿನ ಬಸವ ಗುರುಕುಲದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದಾವಣಗೆರೆ ಹಾಗೂ ಹರಿಹರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತವಾಗಿ ಹಮ್ಮಿಕೊಂಡಿದ್ದ `ಚಿಗುರು-2012~ ಗಿರಿಜನ ಉಪಯೋಜನೆ ಅಡಿ ಸಾಂಸ್ಕೃತಿಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಮಕ್ಕಳಲ್ಲಿರುವ ಕಲಾಪ್ರತಿಭೆಯನ್ನು ಹೊರತೆಗೆಯಲು ಹಲವಾರು ಯೋಜನೆ ರೂಪಿಸಿ ಅನುಷ್ಠಾನಗೊಳಿಸುತ್ತಿದೆ. ಪೋಷಕರು ಶಿಕ್ಷಕ ಸಮುದಾಯ ಸಹಕರಿಸಿ ಎಂದು ಮನವಿ ಮಾಡಿದರು.

ಕಷ್ಟಪಟ್ಟು ಓದುವುದಕ್ಕಿಂತ ಇಷ್ಟಪಟ್ಟು ಕಲಿಯಿರಿ. ಪಠ್ಯೇತರ ಚಟುವಟಿಕೆ ಬೌದ್ಧಿಕ ಪ್ರಗತಿಗೆ ಪೂರಕ ಎಂದು ವಿದ್ಯಾರ್ಥಿಗಳಿಗೆ ಕಸಾಪ ಮಾಜಿ  ಜಿಲ್ಲಾಧ್ಯಕ್ಷ ಎಸ್.ಎಚ್. ಹೂಗಾರ್ ಸಲಹೆ ನೀಡಿದರು.

ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಅಗಾಧ ಪ್ರತಿಭೆ ಅಡಗಿದ್ದು ಹೊರತರಲಾಗುತ್ತಿಲ್ಲ. ಪೋಷಕರು ಪ್ರೋತ್ಸಾಹ ನೀಡಬೇಕು ಎಂದು ತಾ.ಪಂ. ಸದಸ್ಯ ಗೀತಾ ಅಭಿಪ್ರಾಯಪಟ್ಟರು.

ಜಿ.ಪಂ. ಸದಸ್ಯ ಸಿ.ಎನ್. ವೀರಭದ್ರಪ್ಪ ಖಂಜರ ಬಾರಿಸುವ ಕಾರ್ಯಕ್ರಮಕ್ಕೆ ಮೂಲಕ ಚಾಲನೆ ನೀಡಿದರು.

ಬಸವಗುರುಕುಲ ವಿದ್ಯಾಸಂಸ್ಥೆ ಅಧ್ಯಕ್ಷ ಎಚ್.ಬಿ. ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಹರಿಹರ  ತಾಲ್ಲೂಕು ಕಸಾಪ ಅಧ್ಯಕ್ಷ ಡಿ.ಎಂ. ಮಂಜುನಾಥ್, ಕೀಲು ಕುದುರೆ ಕಲಾವಿದ  ಡಿ. ಶಾಂತಪ್ಪ, ಎಚ್.ಎಂ. ಸದಾನಂದ, ಬಿ. ಸಿದ್ದಪ್ಪ, ಚನ್ನಬಸಪ್ಪ, ರವೀಂದ್ರನಾಥ್, ದುರ್ಗದ ಬಸಪ್ಪ ಉಪಸ್ಥಿತರಿದ್ದರು.

ರಂಗಶ್ರೀ ಕಲಾತಂಡದ ಡಿ. ರಂಗನಾಥ್, ತುಂಗಭದ್ರ ಕಲಾತಂಡದ ವಿ. ಯಲ್ಲಪ್ಪ, ವಸಂತಕುಮಾರ್ ಜನಪದ, ಭಾವಗೀತೆ ಹಾಡಿದರು. ಶಾಲಾ ಮಕ್ಕಳು ಜಾನಪದ, ವಚನ ಗಾಯನ, ಕೋಲಾಟ, ನೃತ್ಯ ಪ್ರದರ್ಶಿಸಿದರು. ಮುಖ್ಯ ಶಿಕ್ಷಕ ಎಂ.ಎಸ್. ಮಂಜುನಾಥ್ ಸ್ವಾಗತಿಸಿದರು, ಕೆ. ಶಿರಸಾಚಾರ್ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.