`ಪಡಿತರ ಕಾರ್ಡ್ ವಿತರಿಸಿ'

7

`ಪಡಿತರ ಕಾರ್ಡ್ ವಿತರಿಸಿ'

Published:
Updated:

ಬೆಂಗಳೂರು: `ನ್ಯಾಯಬೆಲೆ ಅಂಗಡಿಯವರಿಗೆ ಮತ್ತು ಸೀಮೆಎಣ್ಣೆ ವಿತರಕರಿಗೆ ಕನಿಷ್ಠ 500 ಪಡಿತರ ಕಾರ್ಡುಗಳನ್ನು ವಿತರಿಸಬೇಕು' ಎಂದು ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ಅಧ್ಯಕ್ಷ ಎನ್.ರುದ್ರಪ್ಪ ಒತ್ತಾಯಿಸಿದರು.ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಇತ್ತೀಚೆಗೆ ಪಡಿತರ ಕಾರ್ಡುಗಳನ್ನು ಕಡಿತಗೊಳಿಸಿರುವುದರಿಂದ ನ್ಯಾಯಬೆಲೆ ಅಂಗಡಿಯವರಿಗೆ ಆದಾಯ ಕಡಿಮೆಯಾಗಿ ನಷ್ಟ ಅನುಭವಿಸುವಂತಾಗಿದೆ. ಇದರಿಂದ ಪಡಿತರ ಕಾರ್ಡುಗಳನ್ನು ಹೆಚ್ಚಿಸಿ, ಕಮಿಷನ್ ಹಣವನ್ನು ರೂ50 ರಿಂದ 60ಕ್ಕೆ ಹೆಚ್ಚಿಸಬೇಕು' ಎಂದು ಆಗ್ರಹಿಸಿದರು.`ಆಹಾರ ಇಲಾಖೆ ಅಧಿಕಾರಿಗಳು ಬಿಪಿಎಲ್ ಕಾರ್ಡುದಾರರನ್ನು ಒತ್ತಾಯಪೂರ್ವಕವಾಗಿ ನೋಂದಣಿ ಮಾಡಿಸಿಕೊಂಡು, ಪ್ರತಿಯೊಬ್ಬರಿಂದಲೂ ಷೇರು ಹಣ ವಸೂಲಿ ಮಾಡಬೇಕೆಂದು ನ್ಯಾಯಬೆಲೆ ಅಂಗಡಿಯವರನ್ನು ಶೋಷಣೆ ಮಾಡುತ್ತಿದ್ದಾರೆ' ಎಂದು ಆರೋಪಿಸಿದರು.`ಸರ್ಕಾರದ ಅಧೀನದಲ್ಲಿರುವ ನ್ಯಾಯಬೆಲೆ ಅಂಗಡಿಗಳಿಗೆ ನೀಡುವ ಸೌಲಭ್ಯ, ಸವಲತ್ತು, ಸಂಬಳ, ಭತ್ಯೆಗಳನ್ನು ನ್ಯಾಯಬೆಲೆ ಅಂಗಡಿಗಳಿಗೂ ನೀಡಬೇಕು. ನ್ಯಾಯಬೆಲೆ ಅಂಗಡಿಯವರು ಸಂಕಷ್ಟದಲ್ಲಿದ್ದಾರೆ. ನಮ್ಮ ಬೇಡಿಕೆಗಳಿಗೂ ಸರ್ಕಾರ ಆದ್ಯತೆ ನೀಡಬೇಕು' ಎಂದು ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry