ಪಡಿತರ ಚೀಟಿಗೆ ಜನರಿಂದ ಹಣ ವಸೂಲಿ: ಆಕ್ರೋಶ

7

ಪಡಿತರ ಚೀಟಿಗೆ ಜನರಿಂದ ಹಣ ವಸೂಲಿ: ಆಕ್ರೋಶ

Published:
Updated:

ಹಾನಗಲ್: ನೂತನ ಪಡಿತರ ಚೀಟಿ ವಿತರಣೆಗೆ ನಿಗದಿತ ಶುಲ್ಕ ರೂ. 20. ಆದರೆ ತಾಲ್ಲೂಕಿನ ಗ್ರಾಮೀಣ ಪ್ರದೇಶ ದಲ್ಲಿ ಫಲಾನುಭವಿಗಳಿಂದ 100 ರಿಂದ 500ರವರೆಗೆ ಹಣ ವಸೂಲಿ ಮಾಡ ಲಾಗುತ್ತಿದೆ ಎಂದು ಆಪಾದಿಸಿದ ತಾಲ್ಲೂಕು ಪಂಚಾಯಿತಿ ಸದಸ್ಯರು ಆಹಾರ ಅಧಿಕಾರಿ ಛತ್ರದ ಅವರನ್ನು ಪಕ್ಷಬೇಧ ಮರೆತು ತರಾಟೆಗೆ ತೆಗೆದು ಕೊಂಡ ಘಟನೆ ಶುಕ್ರವಾರ ನಡೆದ ತಾಲ್ಲೂಕು ಪ್ರಗತಿ ಪರಿಶೀಲನಾ ಸಭೆಯಲ್ಲಿ ಜರುಗಿತು.ನೂತನವಾಗಿ ಸಿದ್ಧಗೊಂಡು ವಿತರಣೆ ಯಾಗುತ್ತಿರುವ ಪಡಿತರ ಚೀಟಿ ವಿತ ರಣೆಯಲ್ಲಿ ಹಣ ವಸೂಲಿ ನಡೆಯು ತ್ತಿದೆ ಎಂದು ಹರಿಹಾಯ್ದ ತಾಪಂ ಅಧ್ಯಕ್ಷ ಮಲ್ಲನಗೌಡ ವೀರನಗೌಡ ಹೆಚ್ಚಿನ ಹಣ ಕೇಳುವ ಸಿಬ್ಬಂದಿಯನ್ನು ಸಭೆಗೆ ಕರೆಯಿಸಿ ಛೀಮಾರಿ ಹಾಕುವಂತೆ ಅಧಿಕಾರಿಗೆ ಆದೇಶಿಸಿದರು. ಮಧ್ಯ ಪ್ರವೇಶಿಸಿದ ತಾಪಂ ಕಾರ್ಯನಿರ್ವಾ ಹಕ ಅಧಿಕಾರಿ ಮನೋಜಕುಮಾರ ಗಡಬಳ್ಳಿ ಗ್ರಾಪಂಗಳಿಂದ ಪಡಿತರ ಚೀಟಿ ವಿತರಿಸುವ ವ್ಯವಸ್ಥೆ ಕೈಗೊಳ್ಳಲಾಗಿದ್ದು, ನಿಗದಿತ ಶುಲ್ಕ ಪಡೆಯುವ ಸ್ಪಷ್ಟ ಸೂಚನೆ ನೀಡುವ ಭರವಸೆಯಿಂದ ಸದಸ್ಯರು ಸುಮ್ಮನಾದರು.ಉತ್ತಮ ಗುಣಮಟ್ಟದ ಜೋಳ, ಕಡಲೆ, ಶೇಂಗಾ, ಗೋವಿನ ಜೋಳ, ಸೂರ್ಯಕಾಂತಿ ಬೀಜಗಳನ್ನು ತಾಲ್ಲೂ ಕಿನ ಎಲ್ಲ ರೈತ ಕೇಂದ್ರಗಳಲ್ಲಿ ವಿತರಿಸ ಲಾಗುತ್ತಿದೆ. ಸುವರ್ಣಭೂಮಿ ಯೋಜ ನೆಯ ಎರಡನೇ ಹಂತದ ಅನುದಾನ ಬಿಡುಗಡೆಗೊಂಡು ಸದಸ್ಯದಲ್ಲಿ ವಿತರಿಸ ಲಾಗುವುದು ಎಂದು ಕೃಷಿ ಅಧಿಕಾರಿ ಹೇಳಿದರು. ತಾಲ್ಲೂಕಿನ ಬಮ್ಮನಹಳ್ಳಿ ರೈತ ಸಂಪರ್ಕ ಕೇಂದ್ರದಲ್ಲಿ ವಿತರಿಸ ಲಾದ ಬಿತ್ತನೆ ಬೀಜಗಳು ಕಳಪೆಯಾ ಗಿವೆ ಎಂದು ಸದಸ್ಯ ಕಲ್ಲವೀರಪ್ಪ ಪವಾಡಿ ಆಪಾದಿಸಿದರು. ಇದಕ್ಕೆ ದನಿಗೂಡಿಸಿದ ಅಧ್ಯಕ್ಷ ವೀರನಗೌಡ ಈಗಾಗಲೇ ವಿತರಿಸಲಾದ ಕಳಪೆ ಬೀಜ ಗಳನ್ನು ವಾಪಸ್ಸು ಪಡೆದು ಗುಣ ಮಟ್ಟದ ಬೀಜಗಳನ್ನು ವಿತರಿಸುವಂತೆ ಕೃಷಿ ಸಹಾಯ ನಿರ್ದೇಶಕ ಅಮೃತೇಶ್ವರ ಅವರಿಗೆ ಸೂಚಿಸಿದರು.ತಾಲ್ಲೂಕಿನ ಗುಡಗುಡಿ ಗ್ರಾಮದಲ್ಲಿ ಕುಡಿಯಲು ಯೋಗ್ಯವಲ್ಲದ ನೀರು ಸರಬರಾಜು ಆಗುತ್ತಿದೆ ಎಂಬ ಕೂಗು ಇದೆ. ಆದ್ದರಿಂದ ಹಾವೇರಿ ಪ್ರಯೋಗಾ ಲಯದಲ್ಲಿ ನೀರು ಗುಣಮಟ್ಟದ ಪರೀಕ್ಷೆ ನಡೆಸುವಂತೆ ತಾಪಂ ಅಧ್ಯಕ್ಷರು ಜಿಪಂ ಎಂಜನಿಯರ್ ಕೆ.ಆರ್.ಮಠದ ಅವರಿಗೆ ಸೂಚಿಸಿದರು.2007ರಿಂದ ಸರ್ವೇ ಇಲಾಖೆಯಲ್ಲಿನ ಪ್ರಕರಣಗಳು ಬಾಕಿ ಇದ್ದು, ಅವುಗಳ ಶೀಘ್ರ ಇತ್ಯರ್ಥಕ್ಕೆ ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ವಿಜಯೇಂದ್ರ ಕನವಳ್ಳಿ ತಹಶೀಲ್ದಾರ ರಮೇಶ ಕೋನ ರೆಡ್ಡಿ ಅವರನ್ನು ಒತ್ತಾಯಿಸಿದರು.ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮಲ್ಲನಗೌಡ ವೀರನಗೌಡ್ರ ಅಧ್ಯಕ್ಷತೆ ಯಲ್ಲಿ ನಡೆದ ಸಭೆಯಲ್ಲಿ ಉಪಾಧ್ಯಕ್ಷೆ ಅನಿತಾ ಶಿವೂರ, ಜಿಪಂ ಉಪಾಧ್ಯಕ್ಷೆ ಗೀತಾ ಅಂಕಸಖಾನಿ, ಸದಸ್ಯರಾದ ಪದ್ಮನಾಭ ಕುಂದಾಪೂರ, ಬಸವರಾಜ ಹಾದಿಮನಿ, ಕಸ್ತೂರೆವ್ವ ವಡ್ಡರ, ತಹಶೀಲ್ದಾರ ರಮೇಶ ಕೊನರೆಡ್ಡಿ, ತಾಪಂ ಅಧಿಕಾರಿ ಮನೋಜಕುಮಾರ ಗಡಬಳ್ಳಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry