ಪಡಿತರ ಚೀಟಿ ಜೆರಾಕ್ಸ್ ಪ್ರತಿ ನೀಡಲು ಸೂಚನೆ

7

ಪಡಿತರ ಚೀಟಿ ಜೆರಾಕ್ಸ್ ಪ್ರತಿ ನೀಡಲು ಸೂಚನೆ

Published:
Updated:

ಚನ್ನಪಟ್ಟಣ: ಪಟ್ಟಣ ಪ್ರದೇಶದ ಎಲ್ಲಾ ಪಡಿತರ ಚೀಟಿದಾರರು ತಮ್ಮ ತಮ್ಮ ಪಡಿತರ ಚೀಟಿಗಳ ಛಾಯಾ ಪ್ರತಿಗಳನ್ನು ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಗಳಿಗೆ ನೀಡುವಂತೆ ತಹಶೀಲ್ದಾರ್ ಅರುಣಪ್ರಭ ಸೂಚನೆ ನೀಡಿದ್ದಾರೆ. ಪಟ್ಟಣ ಪ್ರದೇಶಗಳಲ್ಲಿ ಒಂದೇ ವಿದ್ಯುತ್ ಬಿಲ್ ಸಂಖ್ಯೆಗೆ ಒಂದಕ್ಕಿಂತ ಹೆಚ್ಚು ಪಡಿತರ ಚೀಟಿಗಳ ಜೋಡಣೆಯಾಗಿದ್ದು, ಅರ್ಹ ಪಡಿತರ ಚೀಟಿದಾರರನ್ನು ಗುರುತಿಸುವ ಸಲುವಾಗಿ ಸ್ಥಳ ತನಿಖಾ ಪರಿಶೀಲನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದರಿಂದ ಪಡಿತರದಾರರು ತಮ್ಮ ಪಡಿತರ ಚೀಟಿಯ ಜೆರಾಕ್ಸ್ ಪ್ರತಿಯನ್ನು ನೀಡಲು ಅವರು ಕೋರಿದ್ದಾರೆ. ಪಡಿತರ ಚೀಟಿಗಳಲ್ಲಿನ ವಿಳಾಸ ಅಸ್ಪಷ್ಟ, ಅಪೂರ್ಣವಾಗಿದ್ದಲ್ಲಿ ಅಥವಾ ವಿಳಾಸ ಬದಲಾಯಿಸಿದ್ದಲ್ಲಿ ಛಾಯಾಪ್ರತಿಯ ಹಿಂಭಾಗದಲ್ಲಿ ಸ್ಪಷ್ಟ ವಿಳಾಸವನ್ನು ನಮೂದಿಸುವಂತೆಯೂ ಅರುಣಪ್ರಭ ಪಡಿತರ ಚೀಟಿದಾರರಲ್ಲಿ ಮನವಿ ಮಾಡಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry