ಭಾನುವಾರ, ನವೆಂಬರ್ 17, 2019
29 °C

ಪಡಿತರ ಚೀಟಿ: ಭಾವಚಿತ್ರ ತೆಗೆಸಲು ಸೂಚನೆ

Published:
Updated:

ಹಿರಿಯೂರು: ನಗರ ಪ್ರದೇಶದ ಅಂತ್ಯೋದಯ ಮತ್ತು ಬಿಪಿಎಲ್ ತಾತ್ಕಾಲಿಕ ಪಡಿತರ ಚೀಟಿ ಪಡೆದ ನಾಗರಿಕರು 2012ರಿಂದ ಈಚೆಗೆ ಪಡೆದಿರುವ ಆದಾಯ ದೃಢೀಕರಣ ಪ್ರಮಾಣಪತ್ರದೊಂದಿಗೆ ಭಾವಚಿತ್ರ ಮತ್ತು ಬೆರಳ ಮುದ್ರೆಯನ್ನು ಜುಲೈ 31ರ ಒಳಗೆ ಮಾಡಿಸಲು ತಹಶೀಲ್ದಾರರು ತಿಳಿಸಿದ್ದಾರೆ.ಭಾವಚಿತ್ರ ಮತ್ತು ಬೆರಳ ಮುದ್ರೆಯನ್ನು ಜಯನಗರ ಬಡಾವಣೆಯ ಹಿಂದೂಸ್ಥಾನ್ ಕಂಪ್ಯೂಟರ್ಸ್‌, ಮೇರಿರಸ್ತೆಯ ಸ್ಪಂದನಾ ಕಂಪ್ಯೂಟರ್ಸ್‌, ಅರ್ಬನ್‌ಬ್ಯಾಂಕ್ ಸಮೀಪದ ಶೈ ಇನ್‌ಫೋಟೆಚ್, ಟಿಟಿ ರಸ್ತೆಯ ವಿನೂಸ್ ಪ್ರಾಂಚೈಸಿಗಳಲ್ಲಿ ತೆಗೆಸಬಹುದು. ನಂತರ ಖಾಯಂ ಪಡಿತರ ಚೀಟಿಯನ್ನು ತಾಲ್ಲೂಕು ಕಚೇರಿಯಲ್ಲಿರುವ ಆಹಾರ ಶಾಖೆಯಲ್ಲಿ ಪಡೆಯಬಹುದು ಎಂದು ಮಾಹಿತಿ ನೀಡಿದ್ದಾರೆ.ಗ್ರಾಮೀಣ ಪ್ರದೇಶದವರು ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯ್ತಿ ಕಾರ್ಯಾಲಯದಲ್ಲಿ ಫೋಟೋ ಮತ್ತು ಬೆರಳು ಮುದ್ರೆ ನೀಡಬಹುದು ಎಂದು ತಹಶೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಪ್ರತಿಕ್ರಿಯಿಸಿ (+)