ಪಡಿತರ ಚೀಟಿ ವಿತರಣೆಯಲ್ಲಿ ಅನ್ಯಾಯ: ದೂರು

7

ಪಡಿತರ ಚೀಟಿ ವಿತರಣೆಯಲ್ಲಿ ಅನ್ಯಾಯ: ದೂರು

Published:
Updated:

ಶಿಗ್ಗಾವಿ: ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ವಿತರಣೆಯಲ್ಲಿ  ವಿಳಂಬ ವಾಗುತ್ತಿದ್ದರು ಹಾಗೂ ವಸತಿ ಹೀನರಿಗೆ ಹಾಗೂ ಅರ್ಹರಿಗೆ ಪಡಿತರ ಚೀಟಿ ವಿತರಣೆಯಲ್ಲಿ ಅನ್ಯಾಯವಾಗುತ್ತಿದೆ ಎಂದು ಆಗ್ರಹಿಸಿ ರಾಜ್ಯ ಕಾರ್ಮಿಕರ ಹಿತರಕ್ಷಣಾ ವೇದಿಕೆ ಹಾಗೂ ಜಾಗೃತಿ ಸಂಘದ ಕಾರ್ಯಕರ್ತರು ತಹಸೀಲ್ದಾರ ಎಸ್. ಎಫ್. ಸಂಜೀವಣ್ಣ ಅವರಿಗೆ ಇತ್ತೀಚೆಗೆ ಮನವಿ ಅರ್ಪಿಸಿದರು.ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಾದ ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲರ ಮಾಸಾಶನ, ವೃದ್ಧಾಪ್ಯ ವೇತನ, ವಸತಿ ಹೀನರಿಗೆ ಮನೆಗಳ ವಿತರಣೆ ಸೇರಿದಂತೆ ಹಲವಾರು ಯೋಜನೆಗಳನ್ನು ವಿತರಿಸುವಲ್ಲಿ ಸಂಬಂಧಿಸಿದ ಅಧಿಕಾರಿಗಳು ನಿರ್ಲಕ್ಷ್ಯದಿಂದ ವಿಳಂಬ ಮಾಡುತ್ತಿದ್ದಾರೆ. ಹೀಗಾಗಿ ಸರ್ಕಾರದ ಅರ್ಹ ಯೋಜನೆಗಳು ಫಲಾನುಭವಿಗಳಿಗೆ ತಲುಪಲು ಸಾಧ್ಯವಾಗುತ್ತಿಲ್ಲ. ತಾಲ್ಲೂಕಿನ ವಿವಿಧ ಗ್ರಾಮದ ಬಡ ಕೂಲಿಕಾರರು ನಿತ್ಯ ಸಂಬಂಧಿಸಿದ ಕಚೇರಿಗಳಿಗೆ ಅಲೆಯಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕಂಪ್ಯೂಟರ್ ನೆಪದಲ್ಲಿ ಅರ್ಹ ಫಲಾನುಭವಿಗಳಿಗೆ ಕಳೆದ ಮೂರು- ನಾಲ್ಕು ತಿಂಗಳಿಂದ ಪಡಿತರ ಚೀಟಿ ವಿತರಿಸಿಲ್ಲ. ಅದರಿಂದ ಅನೇಕ ಬಡ ಕೂಲಿಕಾರರಿಗೆ ಅನ್ಯಾಯವಾಗುತ್ತಿದೆ. ತಕ್ಷಣ ಅಧಿಕಾರಿಗಳು ಇತ್ತ ಗಮನ ಹರಿಸಿ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.ರಾಜ್ಯ ಕಾರ್ಮಿಕರ ಹಿತರಕ್ಷಣಾ ವೇದಿಕೆ ಹಾಗೂ ಜಾಗೃತಿ ಸಂಘದ ಪಕ್ಕೀರೇಶ ಶಿಗ್ಗಾಂವ, ಅ್ಲ್ಲಲಾವುದ್ದೀನ್ ಹಿರೇಮಲ್ಲೂರ, ಪಕ್ಕೀರೇಶ ಗುಳೇದ, ವೆಂಕಟೇಶ ವಡ್ಡರ,  ಸಿದ್ದವ್ವ ಗುಳೇದ,  ವಿಜಯಲಕ್ಷ್ಮಿ ಅಂಗಡಿ, ಯಲ್ಲವ್ವ ಬಂಡಿವಡ್ಡರ, ರೇಖಾ ಖುರ್ಸಾಪುರ, ಮಂಜುನಾಥ ವಡ್ಡರ ಹಾಘೂ ಇತರ ಕಾರ್ಮಿಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry