ಪಡಿತರ ಚೀಟಿ ಸಮಸ್ಯೆ ಬಗೆಹರಿಸುವವರು ಯಾರು?

7

ಪಡಿತರ ಚೀಟಿ ಸಮಸ್ಯೆ ಬಗೆಹರಿಸುವವರು ಯಾರು?

Published:
Updated:

ನಾವು ಬೇಲೂರಿನಿಂದ ಬಂದು ಹಾಸನದಲ್ಲಿ ನೆಲಸಿದ್ದೇವೆ. ಅಡುಗೆ ಅನಿಲ ಸಂಪರ್ಕವನ್ನು ಹೊಂದಿದ್ದು ಎ ಪಿ ಎಲ್ ಪಡಿತರ ಚೀಟಿಯನ್ನು ಹೊಂದಿರುತ್ತೇವೆ. ಗ್ಯಾಸ್ ಸಂಪರ್ಕವನ್ನು ಹಾಸನದಲ್ಲಿ ಪಡೆಯುವಾಗ ಗ್ಯಾಸ್ ವಿತರಕರು `ನೀವು ಬೇಲೂರಿನಲ್ಲಿ ಪಡಿತರ ಚೀಟಿ ಹೊಂದ್ದ್ದಿದರೆ ಅದನ್ನು ಇಲ್ಲಿಗೆ ತಕ್ಷಣ ಪಡಿತರ ಚೀಟಿಯನ್ನು ವರ್ಗಾವಣೆ ಮಾಡಿಸಿಕೊಳ್ಳಿ ಇಲ್ಲವಾದಲ್ಲಿ ನಿಮಗೆ ಗ್ಯಾಸ್ ಸಂಪರ್ಕ ನಿಲ್ಲಿಸುತ್ತೇವೆ~ ಎಂದರು.ನಾವು ಬೇಲೂರಿನಲ್ಲಿ ಆಹಾರ ಸರಬರಾಜು ಇಲಾಖೆಯಲ್ಲಿ ನನ್ನ ಎಪಿಎಲ್ ಪಡಿತರ ಚೀಟಿಯನ್ನು ಸರೆಂಡರ್ ಮಾಡಿದೆ. ಅನಂತರ ಅವರು ಹಾಸನಕ್ಕೆ ವರ್ಗಾವಣೆಗೆ ಪತ್ರ ಕೊಟ್ಟರು. ಅದನ್ನು ಹಾಸನದ ಜಿಲ್ಲಾಧಿಕಾರಿ ಕಚೇರಿಯ ಆಹಾರ ಇಲಾಖೆಗೆ ಕೊಟ್ಟಾಗ ಕುಟುಂಬದ ಸದಸ್ಯರು ಎಲ್ಲರೂ ಬಂದು ಫೋಟೋ ತೆಗೆಸಬೇಕು ಎಂದರು.ಅದರಂತೆ ನಮ್ಮ ಕುಟುಂಬದಲ್ಲಿ 4 ಜನರು ಇದ್ದು ದಿನಾಂಕ 25-6-2010 ರಂದು 75 ರೂ. ಫೀಜು ಕಟ್ಟಿ ಭಾವಚಿತ್ರ ತೆಗೆಸಲಾಯಿತು. ಒಂದು ವರ್ಷ 4 ತಿಂಗಳಾದರು ಪಡಿತರ ಚೀಟಿ ಬಂದಿಲ್ಲ. ಕಚೇರಿಯಲ್ಲಿ ವಿಚಾರಿಸಿದರೆ ಬಂದಿಲ್ಲ ಎಂಬ ಒಂದೇ ಉತ್ತರ ನೀಡುತ್ತಾರೆ. ಈ ಸಮಸ್ಯೆಯನ್ನು ಮತ್ತಾರಿಗೆ ಹೇಳುವುದು? ಬಗೆಹರಿಸುವವರು ಯಾರು?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry