ಬುಧವಾರ, ಮಾರ್ಚ್ 3, 2021
26 °C

ಪಡಿತರ ಧಾನ್ಯ ವಿತರಣಾ ಕೇಂದ್ರಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಡಿತರ ಧಾನ್ಯ ವಿತರಣಾ ಕೇಂದ್ರಕ್ಕೆ ಚಾಲನೆ

ಬೆಂಗಳೂರು: ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಯ ಸುಗ್ಗಟ್ಟ ಗ್ರಾಮದಲ್ಲಿ ಬೆಟ್ಟಹಲಸೂರು ರೈತರ ಸೇವಾ ಸಹಕಾರ ಸಂಘದ ವತಿಯಿಂದ ಸಾರ್ವಜನಿಕರಿಗೆ ಪಡಿತರ ಧಾನ್ಯ ವಿತರಿಸಲು ಆರಂಭಿಸಿರುವ ಕೇಂದ್ರಕ್ಕೆ ಕೃಷಿ ಸಚಿವ ಕೃಷ್ಣ ಬೈರೇಗೌಡ ಅವರು ಚಾಲನೆ ನೀಡಿದರು.ನಂತರ ಮಾತನಾಡಿದ ಅವರು ಇಲ್ಲಿಯವರೆಗೆ ಈ ಗ್ರಾಮದ ಜನರು ಎರಡು ಕಿಲೋ ಮೀಟರ್‌ ದೂರದ ಹುಣಸಮಾರನಹಳ್ಳಿಗೆ ಹೋಗಿ ಪಡಿತರ ಧಾನ್ಯವನ್ನು ಹೊತ್ತು ತರಬೇಕಿತ್ತು. ಗ್ರಾಮದಲ್ಲಿಯೇ ಪಡಿತರ ವಿತರಿಸಲು ವ್ಯವಸ್ಥೆ ಮಾಡಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದರು.ಗ್ರಾಮದಲ್ಲಿಯೇ ಪಡಿತರ ಧಾನ್ಯ ವಿತರಿಸಲು ನೂತನ ಶಾಖೆಯನ್ನು ಆರಂಭಿಸಿ, ಒಟ್ಟು 250 ಪಡಿತರ ಚೀಟಿಗಳನ್ನು ಇಲ್ಲಿಗೆ ವರ್ಗಾಯಿಸಲಾಗಿದೆ. ಇದರಿಂದ ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.ಕೋಡುಗಲಹಟ್ಟಿ ಗ್ರಾಮಸ್ಥರೂ  ತಮ್ಮ ಗ್ರಾಮದಲ್ಲಿಯೇ ಪಡಿತರ ಧಾನ್ಯ ವಿತರಿಸಲು ಶಾಖೆಯನ್ನು ಆರಂಭಿಸ ಬೇಕೆಂದು ಮನವಿ ಮಾಡಿದ್ದಾರೆ. ಶೀಘ್ರ ದಲ್ಲಿಯೇ ಆ ಗ್ರಾಮದಲ್ಲಿಯೂ ಪಡಿತರ ಧಾನ್ಯ ವಿತರಿಸಲು ಶಾಖೆ ಆರಂಭಿಸಲು ಸೂಚಿಸಲಾಗಿದೆ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.