ಗುರುವಾರ , ನವೆಂಬರ್ 21, 2019
27 °C

ಪಡಿತರ ವಿತರಣೆಗೆ ಕ್ರಮ ಕೈಗೊಳ್ಳಿ

Published:
Updated:

ಬೆಂಗಳೂರು ಉತ್ತರ ವಲಯ ಯಲಹಂಕ ವಿಭಾಗದಲ್ಲಿ ಪಡಿತರವಾಗಲಿ, ಸೀಮೆಎಣ್ಣೆಯಾಗಲಿ, ಸರಿಯಾಗಿ ವಿತರಣೆಯಾಗುತ್ತಿಲ್ಲ. ಸರ್ಕಾರ ನಿಗದಿಪಡಿಸಿದ ಸಮಯ ಕೇವಲ ತೂಗು ಹಾಕಿರುವ ಹಾಗೂ ಅಂಟಿಸಿರುವ ಹಲಗೆಗೆ ಸೀಮಿತವಾಗಿದೆ. ತೂಕ, ಅಳತೆಗಳಲ್ಲೂ ವಿಪರೀತ ವ್ಯತ್ಯಾಸವಾಗಿ ಗ್ರಾಹಕರ ಕೈಸೇರುತ್ತಿವೆ.



ದಯವಿಟ್ಟು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಗೆ ಸಂಬಂಧಪಟ್ಟ ಅಧಿಕಾರಿಗಳು, ಪಡಿತರ ಹಾಗೂ ಸೀಮೆಎಣ್ಣೆ ವಿತರಕರಿಗೆ ಸೂಕ್ತ ಎಚ್ಚರಿಕೆಯನ್ನು ನೀಡಿ ಸಮಯಕ್ಕೆ ಸರಿಯಾಗಿ ಸರ್ಕಾರದಿಂದ ಸರಬರಾಜು ಆಗುವ ಆಹಾರ ಪದಾರ್ಥಗಳು ಹಾಗೂ ಸೀಮೆಎಣ್ಣೆ ಗ್ರಾಹಕರ ಕೈ ಸೇರುವಂತೆ ಮಾಡಬೇಕೆಂದು ಕಳಕಳಿಯ ಮನವಿ.



 

ಪ್ರತಿಕ್ರಿಯಿಸಿ (+)