ಪಡಿತರ ವಿತರಣೆಯಲ್ಲಿ ಅಕ್ರಮ-ದೂರು

ಶನಿವಾರ, ಜೂಲೈ 20, 2019
24 °C
ಅಂಗಡಿ ಮಾಲೀಕರಿಂದ ಹೆಚ್ಚು ಹಣ ವಸೂಲಿ: ಆಕ್ರೋಶ

ಪಡಿತರ ವಿತರಣೆಯಲ್ಲಿ ಅಕ್ರಮ-ದೂರು

Published:
Updated:

ಮುಳಬಾಗಲು: ತಾಲ್ಲೂಕಿನ ಚೆನ್ನಾಪುರ ಗ್ರಾಮದ ನ್ಯಾಯಬೆಲೆ ಅಂಗಡಿ ಮಾಲೀಕರು ಅಂತ್ಯೋದಯ ಮತ್ತು ಬಿಪಿಎಲ್ ಪಡಿತರ ವಿತರಣೆಯಲ್ಲಿ ಅಕ್ರಮ ಎಸಗಿದ್ದಾರೆ ಎಂದು ಗ್ರಾಮಸ್ಥರು ಗುರುವಾರ ಪ್ರತಿಭಟನೆ ನಡೆಸಿದರು.ಅಂಗಡಿ ಮಾಲೀಕರು ಸರ್ಕಾರ ನಿಗದಿ ಪಡಿಸಿರುವ ದರಕ್ಕಿಂತ ಹೆಚ್ಚು ಹಣ ವಸೂಲಿ ಮಾಡುತ್ತಿದ್ದಾರೆ. ಚೆನ್ನಾಪುರ, ಗಾಂಧೀಪುರ, ಶೇಷಾಪುರ, ರೆಡ್ಡಹಳ್ಳಿ, ಬೊಮ್ಮಸಂದ್ರ, ಯಡಹಳ್ಳಿ ಗ್ರಾಮಗಳ ಪಡಿತರ ಚೀಟಿದಾರರು ಚೆನ್ನಾಪುರದಲ್ಲಿ  ಆಹಾರ ಧಾನ್ಯಗಳನ್ನು ಪಡೆಯಬೇಕಾಗಿದೆ ಎಂದು ಅಲವತ್ತು ಕೊಂಡರು.ಅಂಗಡಿ ಮಾಲೀಕರ ಬಳಿ ಬೋಗಸ್ ಕಾರ್ಡ್‌ಗಳಿರುವ ಅನುಮಾನ ವ್ಯಕ್ತಪಡಿಸಿದ ಗ್ರಾಮಸ್ಥರು ಈ ಕುರಿತು ತನಿಖೆ ನಡೆಸಿ ಪರವಾನಗಿ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.ಉಪ ತಹಶೀಲ್ದಾರ್  ಮುನಿವೆಂಕಟಪ್ಪ, ಆಹಾರ ನಿರೀಕ್ಷಕ ಕೊಂಡಪ್ಪ ಗ್ರಾಮಸ್ಥರಿಂದ ಮನವಿ ಸ್ವೀಕರಿಸಿ ಸೂಕ್ತ ಕ್ರಮ ಜರುಗಿಸುವ ಭರವಸೆ ನೀಡಿದರು. ಮುಖಂಡರಾದ ಕೃಷ್ಣೇಗೌಡ, ಕೆ.ಕೋದಂಡರಾಮು, ಜಯತೀರ್ಥ, ಕೆ.ಎಂ.ಮುನಿಯಪ್ಪ ಗಾಂಧಿಪುರ, ಸುರೇಶ್, ಜಯಪ್ಪ, ಶಂಕರಪ್ಪ, ಸುರೇಶ್,ಸತೀಶ್, ವೆಂಕಟೇಶಗೌಡ, ಯಲುವಹಳ್ಳಿ ವೇಣು, ಗುಜ್ಜಮಾರಂಡಹಳ್ಳಿ ವಿ.ಮುನಿರಾಜು, ಮೋಹನ್, ಅಶೋಕ್, ಸುಭಾಷ್, ನಾರಾಯಣಗೌಡ, ಮುನೇಗೌಡ, ಕೃಷ್ಣ, ರಂಜಿತ್ ಕುಮಾರ್, ವಿಕ್ರಂ, ಭರತ್, ಆನಂದಸಾಗರ,                     ಶ್ರೀನಾಥ್ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry