ಪಡಿತರ ಸುವ್ಯವಸ್ಥೆಗೆ ಆಧಾರ್ ಕಾರ್ಡ್: ನಿಲೇಕಣಿ

7

ಪಡಿತರ ಸುವ್ಯವಸ್ಥೆಗೆ ಆಧಾರ್ ಕಾರ್ಡ್: ನಿಲೇಕಣಿ

Published:
Updated:

ನವದೆಹಲಿ (ಪಿಟಿಐ): ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆ (ಪಿಡಿಎಸ್)ಯನ್ನು ಸುಗಮಗೊಳಿಸಿ, ಸೋರಿಕೆಯನ್ನು ತಡೆಗಟ್ಟಲು `ಆಧಾರ್ ಕಾರ್ಡ್~ ಸಂಖ್ಯೆಗಳನ್ನು ಬಳಸಲಾಗುತ್ತದೆ ಎಂದು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ)ದ ಮುಖ್ಯಸ್ಥ ನಂದನ್ ನಿಲೇಕಣಿ ಮಂಗಳವಾರ ಇಲ್ಲಿ ತಿಳಿಸಿದರು.`ಪಡಿತರ ವ್ಯವಸ್ಥೆಯಲ್ಲಿನ ಲೋಪದೋಷ ಮತ್ತು ನಕಲಿ ಹಾವಳಿಯನ್ನು ನಿರ್ಮೂಲನೆ ಮಾಡಲು ಪಿಡಿಎಸ್‌ಗೆ ನೋಂದಣಿ ಮಾಡುವಾಗ `ಆಧಾರ್~ ಬಳಕೆ ಬಹಳ ಮುಖ್ಯವೆಂದು ಕರಡು ಆಹಾರ ಭದ್ರತಾ ಮಸೂದೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ~ ಎಂದು ಅವರು ಸುದ್ದಿಗಾರರ ಜೊತೆ ಮಾತನಾಡುತ್ತಾ ಹೇಳಿದರು.ಆಹಾರ ಸಚಿವಾಲಯವು ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯನ್ನು ಪುನಶ್ಚೇತನಗೊಳಿಸಲು ರಾಷ್ಟ್ರೀಯ ಮಾಹಿತಿ ಕೇಂದ್ರ ಅಭಿವೃದ್ಧಿಪಡಿಸಿರುವ ತಂತ್ರಜ್ಞಾನ ಸೌಲಭ್ಯ ಬಳಸಲು ಬಯಸಿದ್ದು, ಆಧಾರ್ ಕಾರ್ಡ್ ಸಂಖ್ಯೆಗಳ ತಂತ್ರಜ್ಞಾನ ಬಳಕೆಗೆ ಉತ್ಸುಕವಾಗಿಲ್ಲ ಎಂಬ ವರದಿಗಳಿಗೆ ಅವರು ಮೇಲಿನಂತೆ ಪ್ರತಿಕ್ರಿಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry