ಪಡೆಯುವುದಕ್ಕಿಂತ ಕೊಡುವುದು ಶ್ರೇಷ್ಠ: ಕಲಾಂ

7

ಪಡೆಯುವುದಕ್ಕಿಂತ ಕೊಡುವುದು ಶ್ರೇಷ್ಠ: ಕಲಾಂ

Published:
Updated:
ಪಡೆಯುವುದಕ್ಕಿಂತ ಕೊಡುವುದು ಶ್ರೇಷ್ಠ: ಕಲಾಂ

ಶಿರಾ: ~ಸಮಾಜದಿಂದ ನಾನೇನು ಪಡೆಯಬಲ್ಲೆ ಎಂಬ ಚಿಂತನೆ ಅನರ್ಥಕ್ಕೆ ಕಾರಣವಾಗುತ್ತದೆ. ಸಮಾಜಕ್ಕೆ ನಾನೇನು ಕೊಡಬಲ್ಲೆ ಎಂಬ ಚಿಂತನೆ ಯಶಸ್ಸಿಗೆ ಕಾರಣವಾಗುತ್ತದೆ~ ಎಂದು ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅಭಿಪ್ರಾಯಪಟ್ಟರು.ಪಟ್ಟಣದ ಹೊರವಲಯದಲ್ಲಿರುವ ರಾಮ ಮನೋಹರ ಲೋಹಿಯಾ ಸಮತಾ ವಿದ್ಯಾಲಯ ಆವರಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸೋಮವಾರ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.~ಎಲ್ಲಾರಿಕಿ ನಮಸ್ಕಾರಂ~ ಎಂಬ ಎರಡು ತಮಿಳ್ಗನ್ನಡದ ಪದಗಳೊಂದಿಗೆ ಮಾತು ಪ್ರಾರಂಭಿಸಿದರು. `ಔಪಚಾರಿಕ ಶಿಕ್ಷಣದ ಕೊರತೆಯನ್ನು ಅನೌಪಚಾರಿಕ ಶಿಕ್ಷಣದ ಮೂಲಕ ತುಂಬಿಕೊಡುವ ಸಮತಾ ವಿದ್ಯಾಲಯದ ಯತ್ನ ಶ್ಲಾಘನೀಯ~ ಎಂದರು.~ಸಾಮರ್ಥ್ಯವೃದ್ಧಿಗೆ ವಿಶಿಷ್ಟ ಶಿಕ್ಷಣ ಕ್ರಮ~ ಕುರಿತು ಒಂದು ಗಂಟೆ ಕಾಲ ನಿರರ್ಗಳ ಉಪನ್ಯಾಸ ನೀಡಿದರು. ಸಾಧಿಸುವ ಛಲದ ಸ್ಫೂರ್ತಿಯಿಂದ ಬೆಳಗಿದ ಯುವ ಮನಸ್ಸು ಈ ವಿಶ್ವದ ಅತ್ಯಂತ ಅಮೂಲ್ಯ ಸಂಪನ್ಮೂಲ ಎಂದು ವ್ಯಾಖ್ಯಾನಿಸಿದರು.ಸಾಹಿತಿ ದೇವನೂರು ಮಹಾದೇವ, ರೈತ ಸಂಘದ ಮುಖಂಡ ಕಡಿದಾಳು ಶಾಮಣ್ಣ, ಪ್ರೊ.ರವಿವರ್ಮಕುಮಾರ್, ರೈತ ಸಂಘದ ಅನಸೂಯಮ್ಮ, ಶಾಸಕ ಟಿ.ಬಿ.ಜಯಚಂದ್ರ, ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಆರ್.ಸುರೇಶ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry