ಪಡ್ಡೆಗಳ ಮೆಚ್ಚಿನ `ಚಿಕ್ಣಿ ಚಮೇಲಿ'

7

ಪಡ್ಡೆಗಳ ಮೆಚ್ಚಿನ `ಚಿಕ್ಣಿ ಚಮೇಲಿ'

Published:
Updated:

ಬಾಲಿವುಡ್‌ನ ಬಿಂದಾಸ್ ಬೆಡಗಿ ಕತ್ರೀನಾ ಕೈಫ್ ಯುವಜನರ ಕಣ್ಮಣಿ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಹದಿಹರೆಯದ ಹೈಕಳಿಗೆಲ್ಲ ತಮ್ಮ ಮೊಬೈಲ್‌ನಲ್ಲಿ ಕತ್ರೀನಾ ಚಿತ್ರಗಳೇ ಬೇಕಂತೆ. ಅದಕ್ಕಾಗಿ ಅವರು ಬಿಟ್ಟೂಬಿಡದೆ ಅಂತರ್ಜಾಲ ತಾಣಗಳಲ್ಲಿ ತಡಕಾಡುತ್ತಿದ್ದಾರಂತೆ. ಕಳೆದ ಮೂರು ವರ್ಷಗಳಿಂದಲೂ ಅಭಿಮಾನಿಗಳ ಪ್ರೀತಿಯ ನಶೆ ಇಳಿಯಲು ಬಿಡದಂತೆ ಕಾಪಾಡಿಕೊಂಡು ಬಂದಿರುವ ಈ ಸ್ನಿಗ್ಧ ಸುಂದರಿ ಈ ವರ್ಷವೂ ವರ್ಷದ ರಾಣಿಯಾಗಿ ವಿಜೃಂಭಿಸುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.ತಮ್ಮ ನೆಚ್ಚಿನ ಸಿನಿಮಾ ತಾರೆಯರ ಫೋಟೊ ಡೌನ್‌ಲೋಡ್ ಮಾಡಿಕೊಂಡು ಮೊಬೈಲ್ ಸ್ಕ್ರೀನ್ ಸೇವರ್ ಆಗಿಯೋ, ಭಾವಚಿತ್ರಗಳ ಖಜಾನೆಯಲ್ಲೋ ಜೋಪಾನ ಮಾಡಿಕೊಳ್ಳುವ ಹವ್ಯಾಸದ ಬಗ್ಗೆ ಏರ್‌ಟೆಲ್ ಮೊಬೈಲ್ ಕಂಪೆನಿ ನಡೆಸಿರುವ ವಾರ್ಷಿಕ ಸಮೀಕ್ಷೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆಯಂತೆ. ಅಂದಹಾಗೆ, ಕತ್ರೀನಾ ನಂತರದ ಸರದಿಯಲ್ಲಿ ಕರೀನಾ ಕಪೂರ್, ಪ್ರಿಯಾಂಕಾ ಚೋಪ್ರಾ, ಅನುಷ್ಕಾ ಶರ್ಮ ಮತ್ತು ವಿದ್ಯಾ ಬಾಲನ್ ಇದ್ದಾರಂತೆ. ಪುರುಷರ ಸಾಲಿನಲ್ಲಿ ಕಿಂಗ್ ಖಾನ್ ಶಾರುಖ್ ಅಗ್ರಶ್ರೇಯಾಂಕಿತರಾಗಿದ್ದಾರೆ.`ಏಕ್ ಥಾ ಟೈಗರ್'ನ ಈ ಬಳುಕು ಬಳ್ಳಿ, `ಅಗ್ನಿಪಥ್'ನ `ಚಿಕ್ಣಿ ಚಮೇಲಿ' ಹಾಡಿನಿಂದ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಲ್ಲದೆ, ಅದೇ ಹಾಡಿನ ಭಂಗಿಗಳನ್ನು ಅತ್ಯಧಿಕ ಸಂಖ್ಯೆಯಲ್ಲಿ ಡೌನ್‌ಲೋಡ್ ಮಾಡಿಕೊಂಡ `ಹೆಮ್ಮೆ'ಗೆ ಪಾತ್ರಳಾಗಿದ್ದಾಳೆ!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry