ಪತಿಯ ಕೊಲೆ: ಪತ್ನಿ, ಪ್ರಿಯಕರ ಬಂಧನ

7

ಪತಿಯ ಕೊಲೆ: ಪತ್ನಿ, ಪ್ರಿಯಕರ ಬಂಧನ

Published:
Updated:

ನೆಲಮಂಗಲ: ಪತಿಯನ್ನು ಕೊಲೆ ಮಾಡಿ ತಲೆಮರೆಸಿ ಕೊಂಡಿದ್ದ ಪತ್ನಿ ಮತ್ತು ಪ್ರಿಯಕರನನ್ನು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ.ತುರುವೇಕೆರೆ ತಾಲ್ಲೂಕಿನ ಮಂಚೇನಹಳ್ಳಿ ಗ್ರಾಮದ ನಿವಾಸಿ ಸುರೇಶ್‌ (32) ಕೊಲೆಯಾದವರು. ಆರೋಪಿಗಳಾದ

ರೂಪವತಿ ಹಾಗು ಪ್ರಿಯಕರ ರವಿಕುಮಾರ್‌ನನ್ನು ಬಂಧಿಸ ಲಾಗಿದೆ. ಸುರೇಶ್‌ ಅವರ ಎಂಟು ವರ್ಷಗಳ ಹಿಂದೆ ರೂಪವತಿ ಅವರನ್ನು ಪ್ರೀತಿಸಿ ಮದುವೆಯಾಗಿ ದಾಸನಪುರ ಹೋಬಳಿ ಸಿದ್ದನಹೊಸಹಳ್ಳಿ ಗ್ರಾಮದಲ್ಲಿ ನೆಲೆಸಿದ್ದರು.ಸುರೇಶ್‌ನ ಸ್ನೇಹಿತ ಬಡಗಿ ರವಿಕುಮಾರ್‌ ಮನೆಗೆ ಬರುತ್ತಿದ್ದರಿಂದ ರೂಪವತಿ ಅವರಿಗೂ ಪರಿಚಿತವಾಗಿದ್ದ. ಅವರಿಬ್ಬರ ನಡುವೆ ಅಕ್ರಮ ಸಂಬಂಧ ಇತ್ತು ಎನ್ನಲಾಗಿದೆ. ರವಿಕುಮಾರ್‌ ಮತ್ತು ರೂಪವತಿ ಇಬ್ಬರು ಸುರೇಶ್‌ನನ್ನು ಹೊಳೆನರಸೀಪುರದ ಹೊಳೆಗೆ ಕರೆದೊಯ್ದು ನೀರಿನಲ್ಲಿಳಿದು ಪೂಜೆ ಮಾಡುವಂತೆ ತಿಳಿಸಿ ನೀರಿಗೆ ತಳ್ಳಿದ್ದಾರೆ. ಈಜು ಬಾರದ ಸುರೇಶ್‌ ಮೃತ ಪಟ್ಟಿದ್ದಾನೆ. ನಂತರ ಪತ್ನಿ ರೂಪವತಿ ಮಾದ ನಾಯಕನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪತಿ ನಾಪತ್ತೆ ಬಗ್ಗೆ ದೂರು ನೀಡಿದ್ದರು. ತನಿಖೆ ನಡೆಸಿದಾಗ ಕೊಲೆ ಮಾಡಿರುವುದು ಬೆಳಕಿಗೆ ಬಂತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry