ಭಾನುವಾರ, ಅಕ್ಟೋಬರ್ 20, 2019
21 °C

ಪತಿಯ ಪರ ಸಂಗ: ಪತ್ನಿ ದೂರು

Published:
Updated:

ಗುಲ್ಬರ್ಗ:  ಪತಿಯ ಪರಸಂಗದ ವಿರುದ್ಧ ಪತ್ನಿಯೇ ಠಾಣೆಯ ಮೆಟ್ಟಿಲೇರಿದ ಘಟನೆ ಸಿರನೂರದಲ್ಲಿ ನಡೆದಿದೆ. ತಾಲ್ಲೂಕಿನ ಸಿರನೂರದ ಯಲ್ಲಪ್ಪಾ ಮೇಳಕುಂದಿಯ ಪತ್ನಿ ಮೀನಾಕ್ಷಿ ಫರಹತಾಬಾದ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸ್ಥಳೀಯ ಯುವತಿಯೊಬ್ಬಳ ಜೊತೆ ಓಡಾಡಿಕೊಂಡಿರುವ ಪತಿಯು, ಆಕೆಯನ್ನುಮದುವೆಯಾಗಲು ವರದಕ್ಷಿಣೆ  ಕಿರುಕುಳ ನೀಡುತ್ತಿದ್ದಾನೆ ಎಂದು ದೂರಿದ್ದಾರೆ. 2009ರಲ್ಲಿ ಮೀನಾಕ್ಷಿಹಾಗೂ ಯಲ್ಲಪ್ಪಾ ಮದುವೆಯಾಗಿದ್ದು, ತವರು ಮನೆಯವರು 4.5 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಆ ಬಳಿಕ ಎರಡು ಹೆಣ್ಣು ಮಕ್ಕಳಾಗಿವೆ. ಆದರೆ ಸ್ಥಳೀಯ ಯುವತಿಯೊಬ್ಬಳನ್ನು ಮದುವೆಯಾಗುವ ನೆಪದಲ್ಲಿ ಪತಿಯು ಕಳೆದೊಂದು ವರ್ಷದಿಂದ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾನೆ. ಇದಕ್ಕೆ ಪತಿ ಮನೆಯವರ ಬೆಂಬಲವೂ ಇದೆ. ಈ ಬಗ್ಗೆ ಹಿರಿಯ ಸಂಬಂಧಿಕರು ಪಂಚಾಯಿತಿ ನಡೆಸಿದ್ದರು. ಆದರೂ ಕಿರುಕುಳ ನಿಲ್ಲಿಸಿಲ್ಲ.  ಸೀಮೆಎಣ್ಣೆ ಸುರಿದು ಬೆಂಕಿ ಹಾಕುವುದಾಗಿಯೂ ಬೆದರಿಕೆ ಹಾಕಿದ್ದಾನೆ ಎಂದು ದೂರಿದ್ದಾರೆ.

Post Comments (+)