ಶುಕ್ರವಾರ, ಮೇ 14, 2021
25 °C

ಪತಿಯ ಸಂಗ್ರಹಿತ ವೀರ್ಯದಿಂದ ಗರ್ಭಧಾರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ, (ಪಿಟಿಐ): ಪತಿ ತೀರಿಕೊಂಡ ನಂತರವೂ ಆತನ ಸಂಗ್ರಹಿತ ವೀರ್ಯದಿಂದ ಪತ್ನಿ ಗರ್ಭ ಧರಿಸುವ ದಿನಗಳು ದೂರವಿಲ್ಲ.ಈ ಸಂಬಂಧದ ಉದ್ದೇಶಿತ ಮಸೂದೆಯಲ್ಲಿ ಐವಿಎಫ್ ತಂತ್ರಜ್ಞಾನದ ಮೂಲಕ ವೀರ್ಯ ಬ್ಯಾಂಕಿನಲ್ಲಿ ಸಂಗ್ರಹಿಸಿ ಇಡಲಾಗುವ ವೀರ್ಯ ಬಳಸಿ ಪತ್ನಿ ಗರ್ಭ ಧರಿಸಲು ಅವಕಾಶ ನೀಡಲಾಗಿದೆ.`ಸಾವಿನ ಅಂಚಿನಲ್ಲಿರುವ ಪತಿಯ ವೀರ್ಯ ಸಂಗ್ರಹಿಸಿಡಬೇಕು ಎಂದು ಪತ್ನಿ ಬಯಸಿದಲ್ಲಿ ಈ ಬ್ಯಾಂಕ್‌ನಲ್ಲಿ ಸಂಗ್ರಹಿಸಿ, ಅಗತ್ಯ ಬಂದಾಗ ಆಧುನಿಕ ತಂತ್ರಜ್ಞಾನದ ಮೂಲಕ ಗರ್ಭಧಾರಣೆ ಮಾಡಲು ಮಸೂದೆ ನೆರವಾಗಲಿದೆ~ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಉಪ ಮಹಾ ನಿರ್ದೇಶಕ ಡಾ. ಆರ್.ಎಸ್.ಶರ್ಮ ತಿಳಿಸಿದ್ದಾರೆ.ಮಕ್ಕಳನ್ನು ಪಡೆಯಲು ಪತಿ, ಪತ್ನಿ ಇಬ್ಬರ ಒಪ್ಪಿಗೆಯೂ ಕಡ್ಡಾಯ. ಸಾವಿನ ಅಂಚಿನಲ್ಲಿರುವ ಪತ್ನಿಯ ಅಂಡಾಣುವನ್ನು ಸಂಗ್ರಹಿಸಿ ನಂತರ ಬಾಡಿಗೆ ತಾಯಿಯ ಮೂಲಕ ಮಗು ಪಡೆಯಲು ಸಹ ಪತಿಗೆ ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.