ಶುಕ್ರವಾರ, ಜೂನ್ 25, 2021
21 °C

ಪತಿ– ಪತ್ನಿ ಮುಖಾಮುಖಿ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭುವನೇಶ್ವರ (ಪಿಟಿಐ): ಕೊರಾಪತ್‌ ಲೋಕಸಭೆ ಕ್ಷೇತ್ರದಲ್ಲಿ ಪತಿ – ಪತ್ನಿ ನಡುವಣ ಹೋರಾಟ ತಪ್ಪಿಸಲು ಲಕ್ಷ್ಮಿಪುರದ ಶಾಸಕಿ ಝೀನಾ ಹಿಕಾಕಾ ಅವರನ್ನು ಕಣಕ್ಕಿಳಿಸಲು ಬಿಜೆಡಿ ಮಂಗಳವಾರ ತೀರ್ಮಾಸಿದೆ.ಕಾಂಗ್ರೆಸ್‌ ಅಭ್ಯರ್ಥಿ ಗಿರಿಧರ್‌ ಗಮಾಂಗ್‌ ವಿರುದ್ಧ ಅವರ ಪತ್ನಿ ಹೇಮಾ ಗಮಾಂಗ್‌ ಅವರಿಗೆ ಕಳೆದ ವಾರ ಬಿಜೆಡಿ ಟಿಕೆಟ್‌ ನೀಡಿತ್ತು. ಆದರೆ, ಬಿಜೆಡಿ ಇದೀಗ ತನ್ನ ನಿರ್ಧಾರ ಬದಲಿಸಿದೆ.ಗುನುಪುರದ ಶಾಸಕಿಯಾಗಿರುವ ಹೇಮಾ, ‘ಪತಿ ವಿರುದ್ಧ ಸ್ಪರ್ಧಿಸಲು ಯಾವುದೇ ಅಭ್ಯಂತರವಿಲ್ಲ’ ಎಂದು ತಿಳಿಸಿದ್ದರು. ಇದರ ಹೊರತಾಗಿಯೂ ಪಕ್ಷ ಕೊರಾಪತ್‌ನಿಂದ ಝೀನಾ ಅವರನ್ನು ಕಣಕ್ಕಿಳಿಸುವುದಾಗಿ ಘೋಷಿಸಿದೆ. ಝೀನಾ ಹಿಕಾಕಾ ಅವರನ್ನು 2012ರ ಮಾರ್ಚ್‌ನಲ್ಲಿ ನಕ್ಸಲರು ಅಪಹರಿಸಿದ್ದರು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.