ಪತಿ ಕೊಲೆ: ಬೆಂಗಳೂರು ಟೆಕ್ಕಿ ಸೆರೆ

7

ಪತಿ ಕೊಲೆ: ಬೆಂಗಳೂರು ಟೆಕ್ಕಿ ಸೆರೆ

Published:
Updated:

ಹೈದರಾಬಾದ್‌ (ಪಿಟಿಐ): ಪತಿಯ ಕೊಲೆ ಆರೋಪದಲ್ಲಿ ಬೆಂಗಳೂರಿನ ಸಾಫ್‌್ಟವೇರ್‌ ಎಂಜಿನಿಯರ್‌ ಎನ್‌. ಸೌಜನ್ಯ (24), ಆಕೆಯ ಪ್ರಿಯಕರ ಜೈದೀಪ್‌ ದೇಶಿ ಮತ್ತು ಇನ್ನೊಬ್ಬ ಸ್ವಾಮಿ ರಾಜ್‌ ಕುಮಾರ್‌ ಎಂಬಾತನನ್ನು ಶುಕ್ರವಾರ ಇಲ್ಲಿ ಬಂಧಿಸಲಾಗಿದೆ.ಸೌಜನ್ಯ ಮತ್ತು ಜೈದೀಪ್‌ ಸಹಪಾಠಿಗಳಾಗಿದ್ದು ಆಗ ಪರಸ್ಪರ ಪ್ರೀತಿಸುತ್ತಿ ದ್ದರು.   ಇಬ್ಬರೂ ಪ್ರಸ್ತುತ ಬೆಂಗಳೂರಿನ ಪ್ರತಿಷ್ಠಿತ ಐಟಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಪೋಷಕರ ಒತ್ತಡದ ಮೇರೆಗೆ ಸೌಜನ್ಯ ಸಾರಿಗೆ ನಿಗಮದಲ್ಲಿ ಡೀಸೆಲ್‌ ಮೆಕಾನಿಕ್‌ ಆಗಿದ್ದ ವೆಂಕಟೇಶ್ವರ ರಾವ್‌ ಅವರನ್ನು ವರಿಸಿದ್ದರು. ಸೆ. 14ರಂದು ಸೌಜನ್ಯ, ಜೈದೀಪ್‌ ಹಾಗೂ ಸ್ವಾಮಿ ಸೇರಿ ಇಲ್ಲಿನ ಸಾಂಗಿ ದೇವಸ್ಥಾನವೊಂದರ ಬಳಿ ವೆಂಕಟೇಶ್ವರರಾವ್‌ ಅವರನ್ನು ಕತ್ತು ಕೊಯ್ದು ಕೊಲೆ ಮಾಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry