ಸೋಮವಾರ, ಡಿಸೆಂಬರ್ 16, 2019
17 °C

ಪತ್ನಿಗೆ ಕಿರುಕುಳ: ಕೇರಳ ಸಚಿವರ ರಾಜೀನಾಮೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿರುವನಂತಪುರ (ಪಿಟಿಐ): ಕೇರಳದ ಅರಣ್ಯ ಸಚಿವ ಕೆ. ಬಿ. ಗಣೇಶ್ ಕುಮಾರ್ ಸೋಮವಾರ ತಡ ರಾತ್ರಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.ಕಳೆದ 15 ವರ್ಷಗಳಿಂದ ಗಣೇಶ್ ಕುಮಾರ್ `ನನಗೆ ಮಾನಸಿಕ ಕಿರುಕುಳ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದಾರೆ `ಎಂದು ಆರೋಪಿಸಿ ಗಣೇಶ್ ಅವರ ಪತ್ನಿ ಯಾಮಿನಿ ತಂಕಾಜಿ ಅವರು ಇಲ್ಲಿನ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಗಣೇಶ್ ಕುಮಾರ್ ಅವರು ರಾಜೀನಾಮೆ ನೀಡಿದ್ದಾರೆ.ಸೋಮವಾರ ನಡೆದ ಕಲಾಪದಲ್ಲಿ ಈ ಘಟನೆ ಕುರಿತಂತೆ ವಿರೋಧ ಪಕ್ಷಗಳ ಸಚಿವರುಗಳು ರಾಜೀನಾಮೆಗೆ ಆಗ್ರಹಿಸಿ ಗದ್ದಲ ಎಬ್ಬಿಸಿದ್ದವು.

ಗಣೇಶ್‌ಕುಮಾರ್ ರಾಜೀನಾಮೆಯಿಂದ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರಕ್ಕೆ ತೀವ್ರ ಮುಜುಗರವಾದಂತಾಗಿದೆ.

ಪ್ರತಿಕ್ರಿಯಿಸಿ (+)