ಪತ್ನಿಗೆ ಹೆದರಿ ಸಿಗರೇಟ್‌ ಬಿಟ್ಟ ಒಬಾಮ!

7

ಪತ್ನಿಗೆ ಹೆದರಿ ಸಿಗರೇಟ್‌ ಬಿಟ್ಟ ಒಬಾಮ!

Published:
Updated:

ನ್ಯೂಯಾರ್ಕ್‌ (ಪಿಟಿಐ): ಬರಾಕ್‌ ಒಬಾಮ ಅವರು ವಿಶ್ವದ ದೊಡ್ಡಣ್ಣ ಅಮೆರಿಕದ ಅಧ್ಯಕ್ಷ­ರಾ­ದರೂ ಪತ್ನಿಗೆ ಹೆದರುವ ಪತಿ! ಅವರು ತಮ್ಮ ಪತ್ನಿ ಮಿಶಲ್‌ ಅವರಿಗೆ ಅಂಜಿಕೊಂಡು ಸಿಗರೇಟ್‌ ಸೇದುವುದನ್ನು ಬಿಟ್ಟರಂತೆ. ಹೀಗಂತ ಅವರೇ ವಿಶ್ವಸಂಸ್ಥೆಯ ಅಧಿಕಾರಿಗಳ ಬಳಿ ಹೇಳಿಕೊಂಡಿದ್ದಾರೆ.ಸೋಮವಾರ ಇಲ್ಲಿ ಆರಂಭವಾದ ವಿಶ್ವಸಂಸ್ಥೆಯ ಮಹಾ­ಸಭೆ ಸಂದರ್ಭದಲ್ಲಿ ಈ ಮಹಾಸಭೆಯ ನಡಾವಳಿ ದಾಖಲಿ­ಸುವ ವಿಶೇಷ ಅಧಿಕಾರಿ ಮೈನ ಕಿಯಾಯಿ ಅವ­ರೊಂದಿಗೆ ಒಬಾಮ ಲೋಕಾಭಿರಾಮವಾಗಿ ಮಾತ­ನಾಡು­ತ್ತಿದ್ದರು. ಆಗ ಪ್ರಮಾದ್‌ವಶಾತ್‌ ಈ ಸಂಭಾಷಣೆ ಧ್ವನಿ­ವರ್ಧಕದಲ್ಲಿ ಪ್ರಸಾರ­ಗೊಂಡಿತು ಎಂದು ‘ಎನ್‌ಬಿಸಿ ನ್ಯೂಸ್‌’ ವರದಿ ಮಾಡಿದೆ.‘ಈಗ ನೀವು ಸಿಗರೇಟನ್ನು ಬಿಟ್ಟರಬಹುದು ಅಲ್ಲವೇ’ ಎಂದು ಒಬಾಮ ಅವರು ಕಿಯಾಯಿ ಅವರನ್ನು ಕಿಚಾಯಿಸಿದರು. ಇದಕ್ಕೆ ಉತ್ತರಿಸಿದ ಕಿಯಾಯಿ, ‘ಆಗಾಗ್ಗೆ ಸೇದುತ್ತೇನೆ’ ಎಂದರು. ಇದೇ ಪ್ರಶ್ನೆಯನ್ನು ಕಿಯಾಯಿ ಅವರು ಒಬಾಮ ಅವರಿಗೂ ಕೇಳಿದರು. ಇದಕ್ಕೆ ಮೆಲು ದನಿಯಲ್ಲಿ ಪ್ರತಿಕ್ರಿಯಿಸಿದ ಅಧ್ಯಕ್ಷರು, ‘ಆರು ವರ್ಷಗಳಿಂದ ಸಿಗರೇಟನ್ನು ತುಟಿಗಿಟ್ಟಿಲ್ಲ, ಹೆಂಡತಿಯ ಭಯ’ ಎಂದು ನಸು ನಕ್ಕರು ಎಂದು ‘ಎನ್‌ಬಿಸಿ ನ್ಯೂಸ್‌’ ವರದಿ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry