ಶುಕ್ರವಾರ, ಏಪ್ರಿಲ್ 23, 2021
27 °C

ಪತ್ನಿಪ್ರೇಮ ಮೆರೆದ ಆಸ್ಟ್ರಿಯಾ ಪತಿ .ಪತ್ನಿ ಕರೆದೊಯ್ಯಲು ವಿಶೇಷ ವಿಮಾನ .

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಪ್ರವಾಸಕ್ಕೆ ಬಂದಾಗ ಅನಾರೋಗ್ಯಕ್ಕೆ ತುತ್ತಾದ ಆಸ್ಟ್ರಿಯಾದ  ಮಹಿಳೆಯನ್ನು ಆಕೆಯ ಪತಿ ವಿಶೇಷ ವಿಮಾನ ವ್ಯವಸ್ಥೆ ಮಾಡಿ ತವರಿಗೆ ಕರೆದೊಯ್ಯುವ ಮೂಲಕ ಪತ್ನಿ ಪ್ರೇಮ ಮೆರೆದಿದ್ದಾರೆ.ಆಸ್ಟ್ರಿಯಾದ ರಿನೆಟ್ ಗ್ರಬ್ಬರ್ ಆಯುರ್ವೇದ ಚಿಕಿತ್ಸೆ ಪಡೆಯುವ ಸಲುವಾಗಿ ಭಾರತಕ್ಕೆ ಆಗಮಿಸಿದ್ದರು. ಎರಡು ವಾರ ಹಿಂದೆ ಗೋಕರ್ಣ ಸಮೀಪದ ಚಿಕಿತ್ಸಾಲಯಕ್ಕೆ ಭೇಟಿ ನೀಡಿದ ಸಂದರ್ಭ ರಕ್ತದೊತ್ತಡ ಹೆಚ್ಚಾಗಿ, ‘ಬ್ರೈನ್ ಅನ್ಯೂರಿಸಂ’ಗೆ (ಮಿದುಳಿನ ಸಮಸ್ಯೆ) ತುತ್ತಾಗಿದ್ದರು. ಬಳಿಕ ಆಕೆಯನ್ನು ಚಿಕಿತ್ಸೆಗಾಗಿ ನಗರದ ಎ.ಜೆ.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ವಾರ ಆಕೆಯ ಪತಿ ಬ್ರೂನೋ ಗ್ರಬ್ಬರ್ ಆಸ್ಟ್ರಿಯಾದಿಂದ ನಗರಕ್ಕೆ ಆಗಮಿಸಿದ್ದರು.ಚೇತರಿಸಿಕೊಂಡಿದ್ದರಿಂದ ಆಕೆಯನ್ನು ವಿಶೇಷ ವೈದ್ಯಕೀಯ ಸೌಲಭ್ಯ ಇರುವ ವಿಮಾನದಲ್ಲಿ ತವರಿಗೆ ಕೊಂಡೊಯ್ಯಲು ಪತಿ ಬ್ರೂನೊ ಗ್ರಬ್ಬರ್ ನಿರ್ಧರಿಸಿದ್ದರು. ಏರ್ ಇಂಡಿಯ ಸಂಸ್ಥೆ ವಿಶೇಷ ವಿಮಾನ ತರಿಸಲು ನೆರವಾಗಿತ್ತು.ಜರ್ಮಿನಿಯ ಐಎಫ್‌ಎ-1096 ವಿಶೇಷ ವಿಮಾನದಲ್ಲಿ ಸೋಮವಾರ ಆಕೆಯನ್ನು ಕೆಂಜಾರಿನ ಮಂಗಳೂರು ವಿಮಾನ ನಿಲ್ದಾಣದಿಂದ ಜರ್ಮಿನಿಗೆ  ಕರೆದೊಯ್ಯಲಾಯಿತು. ಒಬ್ಬರು ವೈದ್ಯ ಹಾಗೂ ಒಬ್ಬರು ಅರೆವೈದ್ಯಕೀಯ ಸಿಬ್ಬಂದಿ ಹಾಗೂ ಇಬ್ಬರು ಪೈಲಟ್‌ಗಳು ಈ ಉದ್ದೇಶಕ್ಕಾಗಿ ಆಗಮಿಸಿದ್ದರು.

‘ರಿನೆಟ್ ಗ್ರಬ್ಬರ್ ಆರೋಗ್ಯ ಸುಧಾರಿಸಿದೆ. ಆಕೆಗೆ ವಿಮಾನದಲ್ಲಿ ಪ್ರಯಾಣ ಬೆಳೆಸುವುದಕ್ಕೆ ಯಾವುದೇ ಅಡ್ಡಿ ಇಲ್ಲ ಎಂದು ಖಚಿತವಾದ ಬಳಿಕವಷ್ಟೇ     ಆಕೆಯನ್ನು ಕರೆದೊಯ್ಯಲು ಅನುಮತಿ ನೀಡಿದೆವು’ ಎಂದು ಆಕೆಗೆ ಚಿಕಿತ್ಸೆ  ನೀಡಿದ ವೈದ್ಯ ಡಾ.ಸುನೀಲ್ ಶೆಟ್ಟಿ ತಿಳಿಸಿದರು.‘ರಿನೆಟ್ ಗ್ರಬ್ಬರ್ ಅವರ ಅಳಿಯ ಹಾಗೂ ಸೋದರರೂ ವೈದ್ಯರಾಗದ್ದು, ಅವರು ಈ ವಿಶೇಷ ವಿಮಾನಕ್ಕೆ ಏರ್ಪಾಡು ಮಾಡಿದ್ದರು’ ಎಂದು ಮೂಲಗಳು ತಿಳಿಸಿವೆ.‘ಕೆಂಜಾರಿನ ನೂತನ ವಿಮಾನ ನಿಲ್ದಾಣದಲ್ಲಿ ಅನಾರೋಗ್ಯ ಪೀಡಿತರಿಗೆ ವಿಶೇಷ ವಿಮಾನ ವ್ಯವಸ್ಥೆ ಮಾಡುತ್ತಿರುವುದು ಇದು ಎರಡನೇ ಬಾರಿ. ಮೂರು ತಿಂಗಳ ಹಿಂದೆ ವಿದೇಶಿ ರೋಗಿಯೊಬ್ಬರನ್ನು ವಿಶೇಷ ವಿಮಾನದ ಮೂಲಕ ಮುಂಬೈಗೆ ಕಳುಹಿಸಿಕೊಡಲಾಗಿತ್ತು. ಬ್ರೂನೊ ದಂಪತಿ ಜರ್ಮನಿ ಪಾಸ್‌ಪೋರ್ಟ್ ಹೊಂದಿದ್ದರು. ಭದ್ರತಾ ತಪಾಸಣೆ ಬಳಿಕ ಅವರನ್ನು ಕಳುಹಿಸಿಕೊಡಲಾಯಿತು’ ಎಂದು ಏರ್ ಇಂಡಿಯ ಸಂಸ್ಥೆಯ ವಿಮಾನ ನಿಲ್ದಾಣ ಕಚೇರಿ ವ್ಯವಸ್ಥಾಪಕ ಸೋಮಸುಂದರಂ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.