ಶುಕ್ರವಾರ, ಜೂನ್ 25, 2021
22 °C

ಪತ್ನಿಯನ್ನು ಕೊಂದು ಪರಾರಿಯಾದ ಪತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಹದೇವಪುರ ಸಮೀ­ಪದ ಪೈಲೇಔಟ್‌ನಲ್ಲಿ ವ್ಯಕ್ತಿ­ಯೊಬ್ಬ ಪತ್ನಿಯ ಕತ್ತಿಗೆ ಸೀರೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಪೈಲೇಔಟ್‌ 16ನೇ ‘ಬಿ’ ಅಡ್ಡರಸ್ತೆ ನಿವಾಸಿ ಗೀತಮ್ಮ (24) ಕೊಲೆಯಾದ­ವರು. ಅವರ ಪತಿ ಗೋಪಿ ಘಟನೆ ನಂತರ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಅಡುಗೆ ಸರಿಯಾಗಿ ಮಾಡಿಲ್ಲ ಎಂಬ ಕಾರಣಕ್ಕೆ ಗೋಪಿ, ಪತ್ನಿಯ ಜತೆ ರಾತ್ರಿ ಜಗಳವಾಡಿದ್ದಾನೆ. ಬಳಿಕ ದಂಪತಿ ಪ್ರತ್ಯೇಕ ಕೋಣೆಗಳಲ್ಲಿ ಮಲಗಿದ್ದಾರೆ. ಆ ನಂತರ ಎಚ್ಚರಗೊಂಡ ಆತ ಪತ್ನಿ­ಯನ್ನು ಕೊಲೆ ಮಾಡಿ, ಮಗು­ವನ್ನು ಎತ್ತಿಕೊಂಡು ಪರಾರಿ­ಯಾಗಿ­ದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.ಮೂಲತಃ ಚಿತ್ರದುರ್ಗ ಜಿಲ್ಲೆಯ ಗೀತಮ್ಮ ಅವರು ಎಂಟು ವರ್ಷಗಳ ಹಿಂದೆ ಗೋಪಿಯನ್ನು ವಿವಾಹವಾ­ಗಿ­ದ್ದರು. ದಂಪತಿಗೆ ಮೂವರು ಮಕ್ಕಳಿದ್ದಾರೆ. ಅವರಲ್ಲಿ ಇಬ್ಬರನ್ನು ಗೀತಮ್ಮ ಅವರು ಚಿತ್ರದುರ್ಗದ ತವರು ಮನೆಯಲ್ಲಿ ಬಿಟ್ಟಿದ್ದರು. ಆಂಧ್ರಪ್ರದೇಶ ಮೂಲದ ಗೋಪಿ, ಟ್ಯಾಂಕರ್‌ ಚಾಲಕನಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮಹದೇವಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.