ಪತ್ನಿ ಕೊಂದವನಿಗೆ ಮರಣ ದಂಡನೆ ಶಿಕ್ಷೆ

7

ಪತ್ನಿ ಕೊಂದವನಿಗೆ ಮರಣ ದಂಡನೆ ಶಿಕ್ಷೆ

Published:
Updated:

ಅಜಂಗಡ (ಪಿಟಿಐ): ಪತ್ನಿ ಮತ್ತು ಎರಡು ವರ್ಷದ ಮಗುವನ್ನು ಹತ್ಯೆ ಮಾಡಿದ ವ್ಯಕ್ತಿಗೆ ಅಜಂಗಡ  ನ್ಯಾಯಾಲಯ ಬುಧವಾರ ಮರಣ ದಂಡನೆ  ನೀಡಿದೆ.2009ರಲ್ಲಿ ನಡೆದ ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಹೆಚ್ಚುವರಿ ಮತ್ತು ಸೆಷನ್ಸ್ ನ್ಯಾಯಾಧೀಶ ಎಸ್.ಪಿ. ಆನಂದ್ ಅವರು, ಆರೋಪಿಗೆ ಮರಣ ದಂಡನೆ ವಿಧಿಸಿ ತೀರ್ಪು ನೀಡಿದ್ದಾರೆ. ಪತಿ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಪತ್ನಿ ಅನುಮಾನ ಹೊಂದಿದ್ದಳು. ಈ ಸಂಬಂಧ ಇಬ್ಬರ ನಡುವೆ ಉಂಟಾದ ಜಗಳ, ಅಂತಿಮವಾಗಿ ಕೋಪೋದ್ರಿಕ್ತ ಪತಿ ತನ್ನ ಮಡದಿ ಮತ್ತು ಮಗುವನ್ನು ಹತ್ಯೆ ಮಾಡುವುದರೊಂದಿಗೆ ಕೊನೆಗೊಂಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry