ಶುಕ್ರವಾರ, ಮೇ 7, 2021
25 °C

ಪತ್ನಿ ಕೊಲೆಮಾಡಿದ ಪತಿ, ಅತ್ತೆಗೆ 10 ವರ್ಷ ಶಿಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ತಾಯಿ, ಮಗ ಇಬ್ಬರೂ ಸೇರಿಕೊಂಡು ಗೃಹಿಣಿಯನ್ನು ನೇಣು ಬಿಗಿದು ಹತ್ಯೆ ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇಲ್ಲಿಯ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯವು ಆರೋಪಿಗಳಿಗೆ 10 ವರ್ಷ ಶಿಕ್ಷೆ ಹಾಗೂ 15 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದೆ. ಅಲ್ಲದೇ, ಮೃತ ಗೃಹಿಣಿಯ ತಂದೆಗೆ 25 ಸಾವಿರ ರೂಪಾಯಿ ಪರಿಹಾರ ನೀಡಬೇಕು ಎಂದೂ ಆದೇಶದಲ್ಲಿ ತಿಳಿಸಿದೆ.ಘಟನೆ ವಿವರ: ಬೈಲಹೊಂಗಲ ತಾಲ್ಲೂಕಿನ ತಿಗಡೊಳ್ಳಿ ಗ್ರಾಮದ ಭರಮಪ್ಪ ಕೆಂಚಣ್ಣವರ ಅವರ ಪುತ್ರಿ ಜ್ಯೋತಿ (26) ಅವರನ್ನು ಧಾರವಾಡ ಬಳಿಯ ಸತ್ತೂರಿನ ನವೀನ್ ಶ್ಯಾಗೋಟಿ ಎಂಬುವವರಿಗೆ ಮದುವೆ ಮಾಡಿಕೊಡಲಾಗಿತ್ತು. ಜ್ಯೋತಿ ಅವರು ಹುಕ್ಕೇರಿ ತಾಲ್ಲೂಕಿನ ಮಸರಗುಪ್ಪಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. 2011ರ ಏಪ್ರಿಲ್ 14ರಂದು ಶಾಲೆಯಲ್ಲಿ ಅಂಬೇಡ್ಕರ್ ಜಯಂತಿ ಮುಗಿಸಿಕೊಂಡು ಸತ್ತೂರಿನ ಪತಿಯ ನಿವಾಸಕ್ಕೆ ಬಂದಾಗ ಏಕಾಏಕಿ ಪತಿ ನವೀನ್ ಹಾಗೂ ಅತ್ತೆ ಇಬ್ಬರೂ ಸೇರಿ ಜ್ಯೋತಿ ಅವರನ್ನು ಕೊಂದರು.ಬಳಿಕ ಸಂಶಯ ಬಾರದಿರಲೆಂದು ನೇಣು ಬಿಗಿದ ಸ್ಥಿತಿಯಲ್ಲಿರಿಸಿದ್ದರು. ತನಿಖೆಯ ವಿಚಾರಣೆ ಕೈಗೆತ್ತಿಕೊಂಡಿದ್ದ ಪೊಲೀಸರು ಈ ಸಂಬಂಧ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.ವಾದ-ವಿವಾದಗಳನ್ನು ಆಲಿಸಿದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಕೆ.ನಟರಾಜನ್ ಆರೋಪಿಗಳಿಗೆ ಮೂರು ವರ್ಷ ಕಠಿಣ ಶಿಕ್ಷೆ, ಏಳು ವರ್ಷ ಸಾದಾ ಶಿಕ್ಷೆ ಹಾಗೂ ದಂಡ ವಿಧಿಸಿ ಗುರುವಾರ ತೀರ್ಪು ನೀಡಿದರು.ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಮೇಘರಾಜ ಕಬಾಡಿ ಅವರು ವಾದ ಮಂಡಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.