ಪತ್ನಿ ಕೊಲೆ: ಪತ್ರಕರ್ತನ ಬಂಧನ

ಭಾನುವಾರ, ಜೂಲೈ 21, 2019
25 °C

ಪತ್ನಿ ಕೊಲೆ: ಪತ್ರಕರ್ತನ ಬಂಧನ

Published:
Updated:

ಮಂಗಳೂರು: ದೂರದರ್ಶನ ಚಾನೆಲ್‌ಅರೆಕಾಲಿಕ ವರದಿಗಾರ ಗಂಗಾಧರ್ ಪಡುಬಿದ್ರಿ ಅವರ ಪತ್ನಿ ಹಾಗೂ ನಗರದ ಪ್ರತಿಷ್ಠಿತ ಎಸ್‌ಡಿಎಂ ಕಾನೂನು ಕಾಲೇಜಿನ ಸಹಾಯಕ ಪ್ರೊಫೆಸರ್ ಮಮತಾ ಶೆಟ್ಟಿ (33) ಅವರನ್ನು ನಗರದ ಕೋಡಿಕಲ್‌ನಲ್ಲಿರುವ ಅವರ ಮನೆಯಲ್ಲೇ ಸೋಮವಾರ ಸಂಜೆ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ ಮಾಡಲಾಗಿದೆ. ಈ ಸಂಬಂಧ ಗಂಗಾಧರ್ ಅವರನ್ನು ಬಂಧಿಸಲಾಗಿದೆ.

ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದ ಗಂಗಾಧರ್-ಮಮತಾ ಅವರ ದಾಂಪತ್ಯದಲ್ಲಿ ಕಲಹ ತುಂಬಿತ್ತು. ಎರಡು ದಿನಗಳ ಹಿಂದೆಯಷ್ಟೇ ಉರ್ವ ಠಾಣೆಯಲ್ಲಿ ರಾಜಿ ಪಂಚಾಯಿತಿ ನಡೆದಿತ್ತು. ಆದರೆ ಸೋಮವಾರ ಅವರ ನಡುವಿನ ಕಲಹ ಕೊಲೆಯಲ್ಲಿ ಕೊನೆಗೊಂಡಿತು ಎಂದು ಹೇಳಲಾಗಿದೆ.

ಕೊಲೆ ಮಾಡಿದ ನಂತರ ಆರೋಪಿ ತನ್ನ ಅಣ್ಣ ಮೋಹನಾಂಗಯ್ಯ ಸ್ವಾಮಿ ಅವರಿಗೆ ಮಾಹಿತಿ ನೀಡಿದ. ಸ್ಥಳಕ್ಕೆ ಧಾವಿಸಿದ ಅವರಿಗೆ ಮನೆಯಲ್ಲಿ ಮಮತಾ ಅವರು ಶವವಾಗಿ ಬಿದ್ದಿರುವುದು ಕಂಡುಬಂತು. ಅವರು ತಕ್ಷಣ ಉರ್ವ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸ್ಥಳಕ್ಕೆ ಧಾವಿಸಿ ಬಳಿಕ ಆರೋಪಿಯನ್ನು ಬಂಧಿಸಿದರು.  ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry