ಸೋಮವಾರ, ಜೂನ್ 21, 2021
29 °C

ಪತ್ನಿ, ಪುತ್ರನಿಗೂ ಧರ್ಮಸಿಂಗ್ ಸಾಲ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಸಂಸದ, ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ತಮ್ಮ ಪತ್ನಿ, ಪುತ್ರನಿಗೂ ಸಾಲ ಕೊಟ್ಟಿದ್ದಾರೆ. ಹಿಂದೂ ಅವಿಭಕ್ತ ಕುಟುಂಬದ ಖಾತೆಯಿಂದ ಸ್ವತಃ ಸಾಲ ಪಡೆದಿದ್ದಾರೆ. ಅಲ್ಲದೆ, ಇನ್ನೊಂದೆಡೆ ಪತ್ನಿ ಕೂಡಾ ಮಗನಿಗೆ ಸಾಲ ಕೊಟ್ಟಿದ್ದಾರೆ. ಧರ್ಮಸಿಂಗ್‌ ಅವರಿಗಿಂತಲೂ ಅವರ ಪತ್ನಿ ಪ್ರಭಾವತಿ ಹೆಚ್ಚು ಶ್ರೀಮಂತರು.ಬೀದರ್‌ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಗುರುವಾರ ನಾಮಪತ್ರ ಸಲ್ಲಿಸಿದ ಧರ್ಮಸಿಂಗ್‌ ಅವರು ನಾಮಪತ್ರದೊಂದಿಗೆ ಸಲ್ಲಿಸಿದ ಆಸ್ತಿ ವಿವರ ದಾಖಲೆಗಳಲ್ಲಿ ಈ ಅಂಶಗಳನ್ನು ಉಲ್ಲೇಖಿಸಿದ್ದಾರೆ. ಸ್ವತಃ ತಮ್ಮ ಹೆಸರಿನಲ್ಲಿ, ಪತ್ನಿ ಹೆಸರಿನಲ್ಲಿ ಇರುವ ಆಸ್ತಿ ಮತ್ತು ಹೊಣೆಗಾರಿಕೆ ಜೊತೆಗೆ ಎನ್‌. ಧರ್ಮಸಿಂಗ್‌ (ಹಿಂದೂ ಅವಿಭಕ್ತ ಕುಟುಂಬ)ದ ಹೆಸರಿನಲ್ಲಿಯೂ ಪ್ರತ್ಯೇಕ­ವಾಗಿ ಆಸ್ತಿ ಘೋಷಣೆ ಮಾಡಿದ್ದಾರೆ.ಈ ಮೂರು ಖಾತೆಗಳಿಂದ ಒಟ್ಟು ₨ 23,63,846 ಕೋಟಿ ಮೌಲ್ಯದ ಆಸ್ತಿ ಇದೆ. ಪಿತ್ರಾರ್ಜಿತವಾಗಿ ಬಂದಿರುವ ಆಸ್ತಿ ಒಟ್ಟು ಮೌಲ್ಯ 35 ಲಕ್ಷ ಎಂದು ಧರ್ಮಸಿಂಗ್‌ ವಿವರ ಸಲ್ಲಿಸಿದ್ದಾರೆ. ಪತ್ನಿ, ಪುತ್ರನಿಗೂ ಸಾಲ: ಧರ್ಮಸಿಂಗ್‌ ಅವರು ಪುತ್ರ ಡಾ. ಅಜಯ್‌ ಸಿಂಗ್‌ ಅವರಿಗೆ 5.11 ಲಕ್ಷ,  ಪತ್ನಿ ಪ್ರಭಾವತಿ ಧರ್ಮಸಿಂಗ್ ಅವರಿಗೆ ₨ 5.10 ಲಕ್ಷ ಮತ್ತು ಪ್ರಿಯದರ್ಶಿನಿ ಚಂದ್ರ ಸಿಂಗ್‌ ಅವರಿಗೆ ₨ 6 ಲಕ್ಷ ಸಾಲ ನೀಡಿದ್ದಾರೆ ಎಂದು ದಾಖಲೆಯಲ್ಲಿ ಉಲ್ಲೇಖಿಸಿದ್ದಾರೆ.ಧರ್ಮಸಿಂಗ್ ಸ್ವತಃ ಹಿಂದೂ ಅವಿಭಕ್ತ ಕುಟುಂಬದ ಖಾತೆಯಿಂದ ₨ 1,19 ಕೋಟಿ ಸಾಲ ಪಡೆದಿದ್ದಾರೆ. ಇನ್ನೊಂದೆಡೆ ಪತ್ನಿ ಪ್ರಭಾವತಿ ಅವರೂ ವಿಜಯ್‌ ಸಿಂಗ್‌ ಅವರಿಗೆ ₨ 1 ಲಕ್ಷ ಸಾಲ ನೀಡಿದ್ದಾರೆ ಎಂಬುದನ್ನು ಆಸ್ತಿ ವಿವರದಲ್ಲಿ

ತೋರಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.