ಪತ್ನಿ, ಮಗಳ ಮೇಲೆ ಹಲ್ಲೆ ಆರೋಪ : ಬಂಧನ

7

ಪತ್ನಿ, ಮಗಳ ಮೇಲೆ ಹಲ್ಲೆ ಆರೋಪ : ಬಂಧನ

Published:
Updated:

ಬೆಂಗಳೂರು: ಪತ್ನಿ ಮತ್ತು ಮಗಳ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಮಲ್ಲಿಕಾರ್ಜುನಯ್ಯ (41) ಎಂಬಾತನನ್ನು  ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.ಮದ್ಯವ್ಯಸನಿಯಾದ ಮಲ್ಲಿಕಾರ್ಜುನಯ್ಯ ಪ್ರತಿನಿತ್ಯ ಪಾನಮತ್ತನಾಗಿ ಮನೆಗೆ ಬಂದು ಪತ್ನಿ ಗೌರಮ್ಮ ಹಾಗೂ ಮಕ್ಕಳ ಜತೆ ಜಗಳವಾಡುತ್ತಿದ್ದ. ಅದೇ ರೀತಿ ಆತ ಸೋಮವಾರ ರಾತ್ರಿ ಪಾನಮತ್ತನಾಗಿ ಬಂದು ಪತ್ನಿಯ ಜತೆ ಜಗಳವಾಡಿದ.ಈ ವೇಳೆ ಮಧ್ಯ ಪ್ರವೇಶಿಸಿದ 12 ವರ್ಷದ ಮಗಳನ್ನು ಎಳೆದಾಡಿ ಹಲ್ಲೆ ನಡೆಸಿದ್ದಾನೆ.  ಈ ಸಂಬಂಧ ಗೌರಮ್ಮ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಘಟನೆ ಸಂಬಂಧ ಚಂದ್ರಾಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry