ಬುಧವಾರ, ಜನವರಿ 29, 2020
29 °C

ಪತ್ನಿ ಮೇಲೆ ನ್ಯಾಯಾಂಗ ನಿಂದನೆ ಮೊಕದ್ದಮೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಗಳ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿ­ಸುತ್ತಿರುವ, ಫ್ರೆಂಚ್‌ ಕಾನ್ಸುಲ್‌ ಕಚೇರಿ ಅಧಿಕಾರಿ ಪಾಸ್ಕಲ್‌ ಮಜುರಿಯರ್‌ ಅವರು ಪತ್ನಿ ಸುಜಾ ಜೋನ್ಸ್‌ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿದ್ದಾರೆ.‘ಮೊಮ್ಮಕ್ಕಳನ್ನು ಭೇಟಿ ಮಾಡಲು ಕೌಟುಂಬಿಕ ನ್ಯಾಯಾಲಯ ಅನುಮತಿ ನೀಡಿದ್ದರೂ, ನನ್ನ ತಾಯಿ ಜಾಕಿ ಮಜುರಿಯರ್‌ ಅವರ ಬಳಿ ಪತ್ನಿ ಸುಜಾ  ಮಕ್ಕಳನ್ನು ಕರೆದುಕೊಂಡು ಬಂದಿಲ್ಲ. ಮಕ್ಕಳನ್ನು ಕರೆತರುವಂತೆ ಕೌಟುಂಬಿಕ ನ್ಯಾಯಾಲಯ ಆದೇಶಿಸಿತ್ತು. ಆದರೆ ಅದನ್ನು ಉಲ್ಲಂಘಿಸಿ ನ್ಯಾಯಾಂಗವನ್ನು ನಿಂದಿಸಿದ್ದಾರೆ’ ಎಂದು ಪಾಸ್ಕಲ್‌ ಸಲ್ಲಿಸಿರುವ ಅರ್ಜಿಯಲ್ಲಿ ವಿವರಿಸಲಾಗಿದೆ.ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಲ್‌. ಮಂಜುನಾಥ್‌ ನೇತೃತ್ವದ ವಿಭಾಗೀಯ ಪೀಠ, ಸುಜಾ ಅವರಿಗೆ ನೋಟಿಸ್‌ ಜಾರಿಗೆ ಶುಕ್ರವಾರ ಆದೇಶಿಸಿದೆ. ವಿಚಾರಣೆ ಮುಂದೂಡಲಾಗಿದೆ.ಜಾಕಿ ಅವರು ತಮ್ಮ ಮೊಮ್ಮಕ್ಕಳನ್ನು ಜುಲೈ 24ರಂದು ಮಧ್ಯಸ್ಥಿಕೆ ಕೇಂದ್ರದಲ್ಲಿ ಭೇಟಿ ಮಾಡಬಹುದು ಎಂದು ಕೌಟುಂಬಿಕ ನ್ಯಾಯಾಲಯ ಆದೇಶಿಸಿತ್ತು. ಆದರೆ ಅಂದು ಸುಜಾ ಅವರು ಮಕ್ಕಳನ್ನು ಕರೆದುಕೊಂಡು ಅಲ್ಲಿಗೆ ಬಂದಿರಲಿಲ್ಲ.

ಪ್ರತಿಕ್ರಿಯಿಸಿ (+)