ಮಂಗಳವಾರ, ಜೂನ್ 15, 2021
27 °C

ಪತ್ರಕರ್ತರು ಹೆದರಬೇಕಾಗಿಲ್ಲ: ಪಾಪು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಯುವ ಪತ್ರಕರ್ತರಲ್ಲಿ ಓದುವ ಅಭ್ಯಾಸವಿಲ್ಲ, ಓದದವರು ಬರೆಯಲು ಸಾಧ್ಯವಿಲ್ಲ’ ಎಂದು ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ಹೇಳಿದರು.ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ, ಎಚ್‌ಕೆಇಎಸ್ ವೀರೇಂದ್ರ ಪಾಟೀಲ ಪದವಿ ಕಾಲೇಜಿನ ಪತ್ರಿಕೋದ್ಯಮ  ವಿಭಾಗದ  ಸಹಯೋಗದಲ್ಲಿ ಮಂಗ­ಳವಾರ ಏರ್ಪಡಿಸಿದ್ದ ‘ಭ್ರಷ್ಟಾಚಾರ ನಿಗ್ರಹ:  ಸಮಾಜ, ಮಾಧ್ಯಮ ಮತ್ತು ಕಾನೂನು’ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.‘ಕಣ್ಣಿಗೆ ಕಾಣುವ ಸತ್ಯ ಮತ್ತು  ಕಾಣದ ಸತ್ಯವನ್ನು ಅರಿತುಕೊಳ್ಳುವ ಸಾಮರ್ಥ್ಯ ಪತ್ರಕರ್ತರಿಗೆ ಇರಬೇಕು. ಪತ್ರಕರ್ತರು   ಮಠಗಳು, ರಾಜಕಾರಣಿ­ಗಳು ಮತ್ತು  ಉದ್ಯಮಿಗಳಿಗೆ ಹೆದರುವ ಅವಶ್ಯಕತೆ­ ಇಲ್ಲ’ ಎಂದು ವಿದ್ಯಾರ್ಥಿ ಗಳಿಗೆ ಕಿವಿಮಾತು ಹೇಳಿದರು.ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ.ಎಂ.ಗಂಗಾಧರಪ್ಪ ಮಾತನಾಡಿ, ‘ವಿಶ್ವವಿದ್ಯಾಲಯಗಳು ಉಪಯೋಗಕ್ಕೆ ಬಾರದ ಶಿಕ್ಷಣವನ್ನು ನೀಡುತ್ತಿವೆ. ಪತ್ರಿಕೋದ್ಯಮದ ಪ್ರಾಧ್ಯಾಪಕನಾಗಿ ಈ ಬಗ್ಗೆ ನನಗೆ ಬೇಸರವಿದೆ’ ಎಂದು ಬೇಸರ ವ್ಯಕ್ತಪಡಿಸಿದರು.ಸಮಾಜ ಪರಿವರ್ತನಾ ಸಂಸ್ಥೆಯ ಎಸ್.ಆರ್.ಹಿರೇಮಠ ಅವರು ಮಾತ­ನಾಡಿ, ‘ಮುಕ್ತ ಆರ್ಥಿಕ ನೀತಿ ಮತ್ತು ಪರಮಾಧಿಕಾರ ಭ್ರಷ್ಟಾಚಾರಕ್ಕೆ ಮೂಲ. ಭ್ರಷ್ಟಾಚಾರ ಕೇವಲ ಸಂಪತನ್ನು ಕ್ರೋಢೀಕರಿಸುವುದಲ್ಲ, ಅದು ಅರ್ಹರಿಗೆ ಅನ್ಯಾಯ ಮಾಡುತ್ತದೆ’ ಎಂದರು.‘ಪ್ರಜಾವಾಣಿ’ ವಿಶೇಷ ವರದಿಗಾರ ರವೀಂದ್ರ ಭಟ್ಟ, ಸುವರ್ಣ ಸುದ್ದಿ ವಾಹಿನಿಯ ಪ್ರಧಾನ ಸಂಪಾದಕ ಅನಂತ ಚಿನಿವಾರ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.