ಪತ್ರಕರ್ತರ ಮೇಲೆ ಹಲ್ಲೆ: ಖಂಡನೆ

7

ಪತ್ರಕರ್ತರ ಮೇಲೆ ಹಲ್ಲೆ: ಖಂಡನೆ

Published:
Updated:

ಹುಬ್ಬಳ್ಳಿ: ಹೊಸ ವರ್ಷಾಚರಣೆ ಸಂದರ್ಭ ಹನ್ಸ್‌ ಹೋಟೆಲ್‌ ಮೇಲೆ ಶ್ರೀರಾಮ ಸೇನೆ ಕಾರ್ಯಕರ್ತರ ದಾಳಿಯನ್ನು ವರದಿ ಮಾಡಲು ತೆರಳಿದ್ದ ಪತ್ರಕರ್ತರ ಮೇಲೆ ಹಲ್ಲೆ ನಡೆಸಿರು­ವು­ದನ್ನು ಧಾರವಾಡ ಜಿಲ್ಲಾ ಕಾರ್ಯ­ನಿರತ ಪತ್ರಕರ್ತರ ಸಂಘವು ಖಂಡಿಸಿದೆ. ‘ಖಾಸಗಿ ಸುದ್ದಿ ವಾಹಿನಿಯ ಕ್ಯಾಮೆರಾಮನ್‌ ಮೇಲೆ ಹಲ್ಲೆ ನಡೆಸಿ, ಕ್ಯಾಮೆರಾವನ್ನು ಜಖಂಗೊಳಿಸಲಾಗಿದೆ.

ಈ ಘಟನೆ­ಯಲ್ಲಿ ಹೋಟೆಲ್‌ನ ಸಿಬ್ಬಂದಿ ಜೊತೆಗೆ ವಿದ್ಯಾನಗರ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ಗಿರೀಶ ರೋಡ್ಕರ್‌ ಸಹ ಭಾಗಿ­ಯಾಗಿದ್ದಾರೆ. ಮಾಧ್ಯಮದವರ ಮೇಲೆ ಹಲ್ಲೆ ನಡೆಸಲು ಪ್ರೇರೇಪಿಸಿದ ಇನ್‌ಸ್ಪೆಕ್ಟರ್‌ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಪತ್ರಕರ್ತರಿಗೆ ರಕ್ಷಣೆ ಒದಗಿಸಬೇಕು’ ಎಂದು ಸಂಘದ ಅಧ್ಯಕ್ಷ ಮಂಜುನಾಥ ಭಟ್‌ ಪೊಲೀಸ್‌ ಕಮಿಷ­ನರ್‌ ಅವರನ್ನು ಒತ್ತಾಯಿಸಿದ್ದಾರೆ.ಧಾರವಾಡ: ಹೊಸ ವರ್ಷದ ಸಂಭ್ರಮಾಚರಣೆಯ ದೃಶ್ಯಗಳನ್ನು ಸೆರೆಹಿಡಿಯಲು ಹುಬ್ಬಳ್ಳಿಯ ಹೋಟೆಲೊಂದಕ್ಕೆ ಹೋಗಿದ್ದ ಖಾಸಗಿ ಚಾನೆಲ್‌ನ ಕ್ಯಾಮೆರಾಮನ್‌ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿರುವ ಧಾರವಾಡದ ಪತ್ರ­ಕರ್ತರು, ತಪ್ಪಿತಸ್ಥ ಹೋಟೆಲ್‌ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್­ಳುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಸಮೀರ್‌ ಶುಕ್ಲಾ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.ಕ್ಯಾಮೆರಾಮನ್‌ ಮೇಲೆ ಹೋಟೆಲ್‌ ಮಾಲೀಕರು ಸೇರಿ­ದಂತೆ ಸಿಬ್ಬಂದಿ ಹಲ್ಲೆ ಮಾಡಿದ್ದು, ಲಕ್ಷಾಂತರ ಮೌಲ್ಯದ ಕ್ಯಾಮೆರಾ ಜಖಂಗೊಳಿಸಿದ್ದಾರೆ. ಮಾಧ್ಯ­-­ಮ­ದ ಮೇಲೆ ಮೇಲಿಂದ ಮೇಲೆ ಇಂತಹ ಘಟನೆಗಳು ನಡೆಯುತ್ತಿದ್ದು, ಕೂಡಲೇ ಹಲ್ಲೆ ಮಾಡಿದ ಆರೋಪಿ­ಗಳನ್ನು ಬಂಧಿಸಬೇಕೆಂದು ಪತ್ರಕರ್ತರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.‘ಪತ್ರಕರ್ತರಿಗೆ ಸೂಕ್ತ ರಕ್ಷಣೆ ನೀಡಬೇಕು. ಹಲ್ಲೆಗೊಳಗಾದ ಕ್ಯಾಮೆ­ರಾ­ಮನ್‌ಗೆ ಸೂಕ್ತ ಪರಿಹಾರ ನೀಡ­ಬೇಕು ಹಾಗೂ ಜಿಲ್ಲಾಡಳಿತ ಹೋಟೆಲ್‌ ಮಾಲೀಕರ ಮೇಲೆ ಸ್ವಯಂ ಪ್ರೇರಿತ ದೂರು ದಾಖಲಿಸಿ ಕ್ರಮ ಕೈಗೂಳ್­ಳಬೇಕೆಂದು’ ಆಗ್ರಹಿಸಿದರು. ಪತ್ರಕರ್ತರಾದ ರಾಜೇಂದ್ರ ಪಾಟೀಲ, ಸುರೇಶ ಜಾಡರ, ವೆಂಕನ­ಗೌಡ ಪಾಟೀಲ, ಮಂಜುನಾಥ ಅಂಗಡಿ, ಬಸವರಾಜ ಹಿರೇಮಠ, ಮುಸ್ತಫಾ ಕುನ್ನಿಭಾವಿ. ಜಾವೇದ ಅಧೋನಿ, ರವೀಶ ಪವಾರ, ಸಂತೋಷ, ಸುಭಾನಿ ಹುಕ್ಕೇರಿ, ಆರ್.ಕೆ. ಕುಲ­ಕರ್ಣಿ, ರವಿ ಉಳ್ಳಾಗಡ್ಡಿ, ಪ್ರಕಾಶ ಹೆಬ್ಬಳ್ಳಿ, ಪ್ರಶಾಂತ ದಿನ್ನಿ ಇತರರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry