ಪತ್ರಕರ್ತರ ಸಮಾವೇಶ ನಾಳೆ

ಬುಧವಾರ, ಜೂಲೈ 17, 2019
24 °C

ಪತ್ರಕರ್ತರ ಸಮಾವೇಶ ನಾಳೆ

Published:
Updated:

ಹಾವೇರಿ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಜು.21 ರಂದು ಬೆಳಿಗ್ಗೆ 10.30ಕ್ಕೆ ಜಿಲ್ಲಾ ಪತ್ರಕರ್ತರ ಸಮಾವೇಶ ಹಾಗೂ ಪತ್ರಿಕಾ ದಿನಾಚರಣೆ ಸಮಾರಂಭವನ್ನು ನಗರದ ಜಿಲ್ಲಾ ಸರ್ಕಾರಿ ನೌಕರರ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.ಸಮಾವೇಶದ ಸಾನಿಧ್ಯವನ್ನು ಸದಾಶಿವ ಶ್ರೀಗಳು ವಹಿಸಲಿದ್ದು, ಸಣ್ಣ ಕೈಗಾರಿಕೆ, ಮುಜರಾಯಿ, ಸಕ್ಕರೆ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಕಾಶ ಹುಕ್ಕೇರಿ ಉದ್ಘಾಟಿಸಲಿದ್ದಾರೆ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಿಂಗಪ್ಪ ಚಾವಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಭಾಷಣಕಾರರಾಗಿ `ಪ್ರಜಾವಾಣಿ' ದಿನಪತ್ರಿಕೆಯ ನಿವೃತ್ತ ಸಹಸಂಪಾದಕ ಗೋಪಾಲಕೃಷ್ಣ ಹೆಗಡೆ ಆಗಮಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ನೆಹರು ಯುವಕೇಂದ್ರದ ಮಹಾನಿರ್ದೇಶಕ ಸಲೀಂ ಅಹ್ಮದ್, ಶಾಸಕ ರುದ್ರಪ್ಪ ಲಮಾಣಿ, ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ, ರಾಣೇಬೆನ್ನೂರು ಶಾಸಕ ಕೆ.ಬಿ.ಕೋಳಿವಾಡ, ಶಿಗ್ಗಾವಿ ಶಾಸಕ ಬಸವರಾಜ ಬೊಮ್ಮಾಯಿ, ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ ಹಾಗೂ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಂಗಾಧರ ಮೊದಲಿಯಾರ, ಪ್ರಧಾನ ಕಾರ್ಯದರ್ಶಿ ಎನ್.ರಾಜು, ಜಿಲ್ಲಾಧಿಕಾರಿ ಪಾಂಡುರಂಗ ನಾಯಕ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ   ಎನ್.ಶಶಿಕುಮಾರ, ಮಾಜಿ ಶಾಸಕ ಓಲೇಕಾರ, ಮಾಜಿ ಶಾಸಕ ಬಿ.ಸಿ. ಪಾಟೀಲ ಆಗಮಿಸಲಿದ್ದಾರೆ.ಅಂದು ಮಧ್ಯಾಹ್ನ 12.30ಕ್ಕೆ ವಿಚಾರಗೋಷ್ಠಿ ನಡೆಯಲಿದ್ದು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ  ಪರಶುರಾಮ ಅಗಡಿ ಅಧ್ಯಕ್ಷತೆ ವಹಿಸಲಿದ್ದಾರೆ. ವಿಜಾಪುರ ಮಹಿಳಾ ವಿವಿ ಪ್ರಾಧ್ಯಾಪಕ ಡಾ.ಓಂಕಾರ ಕಾಕಡೆ ಅವರು `ಮಾಧ್ಯಮದ ತಲ್ಲಣಗಳು' ಎಂಬ ವಿಷಯವಾಗಿ ಉಪನ್ಯಾಸ ನೀಡಲಿದ್ದಾರೆ.ಸಂಸದ ಶಿವಕುಮಾರ ಉದಾಸಿ, ವಿಧಾನ ಪರಿಷತ್ ಸದಸ್ಯ  ಶ್ರೀನಿವಾಸ ಮಾನೆ, ಶಾಸಕ, ಯು.ಬಿ.ಬಣಕಾರ, ರಾಜ್ಯ ಕಾ.ನಿ.ಪ.ರಾಷ್ಟ್ರೀಯ ಮಂಡಳಿ ಸದಸ್ಯ ವಿಜಯ್ ಹೂಗಾರ, ಹಾವೇರಿ ಪ್ರೆಸ್ ಕ್ಲಬ್ ಅಧ್ಯಕ್ಷ ಗಂಗಾಧರ ಹೂಗಾರ, ಮಿಡಿಯಾ ಕ್ಲಬ್ ಅಧ್ಯಕ್ಷ ಶಿವಕುಮಾರ ಹುಬ್ಬಳ್ಳಿ ಹಾಗೂ ಕಾ.ನಿ.ಪ.ಮಂಡಳಿ ಸದಸ್ಯ ರಾಮು ಮುದಿಗೌಡರ ಅತಿಥಿಗಳಾಗಿ ಆಗಮಿಸಿಲಿದ್ದಾರೆ.ಪತ್ರಕರ್ತರಾದ ರೇವಣಸಿದ್ದಯ್ಯ ಮಹಾನುಭಾವಿಮಠ, ಬಿ.ಎಸ್. ಹಿರೇಮಠ, ಸವಣೂರಿನ ಅಶೋಕ ಕಾಶೆಟ್ಟಿ, ಗಿರೀಶ ದೇಶಪಾಂಡೆ ಪಾಲ್ಗೊಳ್ಳುವರು.ಮಧ್ಯಾಹ್ನ 3.30ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಕಾನಿಪ ಸಂಘದ ರಾಜ್ಯ ಅಧ್ಯಕ್ಷ ಗಂಗಾಧರ ಮೊದಲಿಯಾರ ಅಧ್ಯಕ್ಷತೆ ವಹಿಸಲಿದ್ದಾರೆ.

ಜಿ.ಪಂ.ಅಧ್ಯಕ್ಷ ಶಂಕ್ರಣ್ಣ ಮಾತನವರ, ಹಾನಗಲ್ ಶಾಸಕ ಮನೋಹರ ತಹಶೀಲ್ದಾರ್, ರಾಷ್ಟ್ರೀಯ ಪರ್ತಕರ್ತರ ಒಕ್ಕೂಟ ಮಂಡಳಿಯ ಸದಸ್ಯ ಅಶೋಕ ಕಾಶೆಟ್ಟಿ, ವಿಧಾನ ಪರಿಷತ್ ಮಾಜಿ ಸದಸ್ಯ ಶಿವರಾಜ ಸಜ್ಜನರ್ ಆಗಮಿಸಲಿದ್ದಾರೆ.ಪತ್ರಕರ್ತರಾದ ಶಿವಾನಂದ ಗೊಂಬಿ, ಟಿ.ಎಸ್.ವೇದಮೂರ್ತಿ, ರವಿ ಮೇಗಳಮನಿ, ಬಸವಂತಪ್ಪ ಹುಲ್ಲತ್ತಿ, ಜಿ.ಎಸ್.ನೇಸ್ವಿ ಪಾಲ್ಗೊಳ್ಳಲಿದ್ದಾರೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಪರಶುರಾಮ ಅಗಡಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry