ಪತ್ರಕರ್ತೆ ನೈನಾಗೆ ಸರೋಜಿನಿ ನಾಯ್ಡು ಪ್ರಶಸ್ತಿ

7

ಪತ್ರಕರ್ತೆ ನೈನಾಗೆ ಸರೋಜಿನಿ ನಾಯ್ಡು ಪ್ರಶಸ್ತಿ

Published:
Updated:

ಮಂಗಳೂರು: ಕಾರ್ಯನಿರತ ಪತ್ರಕರ್ತರಿಗೆ ನೀಡಲಾಗುವ 2013ನೇ ಸಾಲಿನ ಸರೋಜಿನಿ ನಾಯ್ಡು ರಾಷ್ಟ್ರ ಪ್ರಶಸ್ತಿಯು ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಯ ಮಂಗಳೂರಿನ ಹಿರಿಯ ವರದಿಗಾರ್ತಿ ನೈನಾ ಜೆ.ಎ. ಅವರಿಗೆ ಲಭಿಸಿದೆ.

ಮಹಿಳೆ ಮತ್ತು ಪಂಚಾಯಿತಿ ರಾಜ್ ಎಂಬ ವಿಷಯದಲ್ಲಿ ಪ್ರಕಟವಾಗುವ ಅತ್ಯುತ್ತಮ ವರದಿಯನ್ನು ಬರೆದ ಪತ್ರಕರ್ತರನ್ನು ಗುರುತಿಸಿ ಅಂತರರಾಷ್ಟ್ರೀಯ ಸಂಸ್ಥೆ ‘ದಿ ಹಂಗರ್ ಪ್ರಾಜೆಕ್ಟ್‌’ ವತಿಯಿಂದ ಪ್ರತಿ ವರ್ಷ ಈ ಪ್ರಶಸ್ತಿ ನೀಡಲಾಗುತ್ತಿದೆ. ನೈನಾ ಬರೆದ ‘ಟ್ರ್ಯಾಷ್‌ ಟು ಟ್ರೆಷರ್ ಕಡಬ ಜಿಪಿ ಶೋಸ್ ದಿ ವೇ’ ಎಂಬ ಲೇಖನಕ್ಕೆ ಈ ಪ್ರಶಸ್ತಿ  ಲಭಿಸಿದೆ. ಅಕ್ಟೋಬರ್ 1ರಂದು ನವದೆಹಲಿಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಪ್ರಶಸ್ತಿಯು ರೂ 2 ಲಕ್ಷ  ನಗದು ಹೊಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry