ಬುಧವಾರ, ನವೆಂಬರ್ 20, 2019
20 °C

ಪತ್ರಕರ್ತ ಡೇ ಹತ್ಯೆ: ಮೂವರು ವಶಕ್ಕೆ

Published:
Updated:

ಮುಂಬೈ (ಪಿಟಿಐ): ಪತ್ರಕರ್ತ ಜೆ.ಡೇ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬುಧವಾರ ಮೂವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಮೂವರೂ ಪಾತಕಿಗಳು ಚೋಟಾ ಶಕೀಲ್‌ನ ಸಹಚರರು ಎಂದು ಶಂಕಿಸಲಾಗಿದೆ. 

`ಡೇ ಹತ್ಯೆ ಪ್ರಕರಣ ಸಂಬಂಧ ಮೂವರನ್ನು ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣದಲ್ಲಿ ಅವರ ಪಾತ್ರದ ಕುರಿತಂತೆ ತನಿಖೆ ನಡೆಸುತ್ತಿದ್ದೇವೆ~ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಬಂಧಿತರು  ದಾವೂದ್ ಇಬ್ರಾಹಿಂನ ಬಲಗೈ ಬಂಟ  ಚೋಟಾ ಶಕೀಲ್‌ನ ಸಹಚರರು ಎಂದು ಶಂಕಿಸಲಾಗಿದ್ದು, ಅವರ  ಚರಿತ್ರೆ ಪರಿಶೀಲಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)