ಪತ್ರದ ಕರಡಿಗೆ ಸುಪ್ರೀಂ ಒಪ್ಪಿಗೆ

7

ಪತ್ರದ ಕರಡಿಗೆ ಸುಪ್ರೀಂ ಒಪ್ಪಿಗೆ

Published:
Updated:

ಇಸ್ಲಾಮಾಬಾದ್ (ಪಿಟಿಐ): ಹಲವು ವಾರಗಳ ಕಾಲ ನಡೆದ ವಾದ ವಿವಾದ, ಕಚ್ಚಾಟಗಳ ನಂತರ ಪಾಕಿಸ್ತಾನದ ಅಧ್ಯಕ್ಷ ಅಸೀಫ್ ಅಲಿ ಜರ್ದಾರಿ ವಿರುದ್ಧದ ಭ್ರಷ್ಟಾಚಾರ ಆರೋಪಗಳ ಕುರಿತು ಸ್ವಿಟ್ಜರ್ಲೆಂಡ್ ಸರ್ಕಾರಕ್ಕೆ ತನಿಖೆ ನಡೆಸಲು ಅನುಮತಿ ನೀಡುವ ಕರಡುಪತ್ರಕ್ಕೆ ಪಾಕ್ ಸುಪ್ರೀಂಕೋರ್ಟ್ ಅನುಮತಿ ನೀಡಿದೆ. ಮುಖ್ಯ ನ್ಯಾಯಮೂರ್ತಿ ಅಸೀಫ್ ಸಯೀದ್ ಖೋಸಾ ನೇತೃತ್ವದ ಪೀಠಕ್ಕೆ ಕಾನೂನು ಸಚಿವ ಫಾರೂಕ್ ನೇಕ್ ಕರಡುಪತ್ರ ಸಲ್ಲಿಸಿದ್ದು, ರಹಸ್ಯ ಸಭೆಯ ನಂತರ ಪೀಠ ಇದನ್ನು ಅನುಮೋದಿಸಿತು.ಸರ್ಕಾರ ಈ ಸಂಬಂಧ ಪೀಠಕ್ಕೆ ಸಲ್ಲಿಸುತ್ತಿರುವ ಮೂರನೆಯ ಕರಡುಪತ್ರ ಇದಾಗಿದ್ದು, ಅಧ್ಯಕ್ಷ ಜರ್ದಾರಿ ಅವರಿಗೆ ನೀಡಲಾಗಿರುವ ವಿನಾಯಿತಿ ಹಾಗೂ ಅಂತಾರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ಸ್ವಿಟ್ಜರ್ಲೆಂಡ್‌ನಲ್ಲಿ ವಿಚಾರಣೆ ನಡೆಯಬೇಕು ಎಂದು ತಿಳಿಸಲಾಗಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡೂ ದೇಶಗಳ ನಡುವೆ ಕಾನೂನು ಸಹಕಾರ ಪುನರ್‌ಸ್ಥಾಪನೆಯಾಗುವ ವಿಚಾರವನ್ನೂ ಈ ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ. ಈ ಸಂಬಂಧದ ವಿಚಾರಣೆಯನ್ನು ಕೋರ್ಟ್ ನವೆಂಬರ್ 14ಕ್ಕೆ ಮುಂದೂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry