ಶುಕ್ರವಾರ, ಫೆಬ್ರವರಿ 26, 2021
18 °C

ಪತ್ರಲೇಖಾ ಸಿನಿ ಪಯಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪತ್ರಲೇಖಾ ಸಿನಿ ಪಯಣ

ಅಪ್ಪನಿಗೆ ಮಗಳು ತಮ್ಮಂತೆ ಚಾರ್ಟೆಡ್ ಅಕೌಂಟೆಂಟ್‌ ಆಗಬೇಕು ಎಂಬ ಆಸೆ. ಆದರೆ ಮಗಳು ಆಯ್ಕೆ ಮಾಡಿಕೊಂಡಿದ್ದು ಬಣ್ಣದ ಜಗತ್ತನ್ನು. ನಟಿಯಾಗಬೇಕು ಎಂಬ ಆಸೆ ಇಟ್ಟುಕೊಂಡು ಬಂದ ನಟಿ ಪತ್ರಲೇಖಾ ಅವರ ಸಿನಿಮಾ ಪಯಣ ಹೇಳಿಕೊಳ್ಳುವಷ್ಟು ಸುಲಭವಾಗಿರಲಿಲ್ಲವಂತೆ. ಮಧ್ಯಮವರ್ಗದ ಕುಟುಂಬದಿಂದ ಬಂದ ಈ ಬಂಗಾಲಿ ಬೆಡಗಿ ‘ಸಿಟಿಲೈಟ್ಸ್‌’ ಸಿನಿಮಾದಲ್ಲಿ ಹಳ್ಳಿ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು ತಮ್ಮ ಸಿನಿಪಯಣದ ಅನುಭವ ಹಂಚಿಕೊಂಡಿದ್ದಾರೆ.‘ನಮ್ಮದು ಮಧ್ಯಮ ವರ್ಗದ ಕುಟುಂಬ. ಅಪ್ಪ ಚಾರ್ಟೆಡ್‌ ಅಕೌಂಟೆಂಟ್‌ ಆಗಿ ಕೆಲಸ ಮಾಡುತ್ತಿದ್ದರು. ನಾನು ಕೂಡ ಅವರಂತೆ ಆಗಬೇಕು ಎಂಬ ಆಸೆ ಅವರದು. ಆದರೆ ನಾನು ಕಂಡಿದ್ದು ಸಿನಿಮಾ ಕನಸು’ ಎನ್ನುತ್ತಾರೆ ಪತ್ರಲೇಖಾ. ಅಂದಹಾಗೆ, ಪತ್ರಲೇಖಾ ಹುಟ್ಟಿ ಬೆಳೆದಿದ್ದು ಶಿಲ್ಲಾಂಗ್‌ನಲ್ಲಿ. ಹೈಸ್ಕೂಲು ಶಿಕ್ಷಣ ಮುಗಿಸಿದ್ದು ಅಸ್ಸಾಂನಲ್ಲಿ. ಪದವಿ ಮುಗಿಸುವ ಕನಸು ಕಟ್ಟಿಕೊಂಡು ಕನಸಿನ ನಗರಿ ಮುಂಬೈಗೆ ಕಾಲಿಟ್ಟರು. ಓದಲೆಂದು ಬಂದ ಇವರು ಅಭಿನಯ ತರಗತಿ, ಕಾರ್ಯಾಗಾರಕ್ಕೆ ಸೇರಿಕೊಂಡರಂತೆ.ಪತ್ರಲೇಖಾ ಅವರು ‘ಸಿಟಿಲೈಟ್ಸ್‌’ ಸಿನಿಮಾದಲ್ಲಿ ರಾಜಸ್ತಾನಿ ಹಳ್ಳಿ ಹುಡುಗಿ ಪಾತ್ರ ನಿಭಾಯಿಸುತ್ತಿದ್ದಾರೆ. ಸಿನಿಮಾದಲ್ಲಿನ ಪಾತ್ರದ ಬಗ್ಗೆ ಕೇಳಿದರೆ ಈ ಪಾತ್ರ ಅವರಿಗೆ ತುಂಬಾ ಕಷ್ಟವೇನೂ ಆಗಿಲ್ಲವಂತೆ. ‘ಈ ಸಿನಿಮಾ ಸಾಮಾನ್ಯರ ಜನರ ಜೀವನದ ಕುರಿತೇ ಆಗಿದೆ. ನಾನು ಕೂಡ ಸಾಮಾನ್ಯ ಹುಡುಗಿ. ಈ ಸಿನಿಮಾ ಚಿತ್ರೀಕರಣಕ್ಕಾಗಿ ರಾಜಸ್ತಾನದಲ್ಲಿ ಮೂರು ವಾರ ಕಳೆದಿದ್ದೆವು. ಅಲ್ಲಿನ ಜನರ ಜತೆ ಬೆರೆತ ಅನುಭವ ಚೆನ್ನಾಗಿತ್ತು. ಅವರ ಮಾತು, ಊಟ–ತಿಂಡಿ ಎಲ್ಲವೂ ನನಗೆ ಇಷ್ಟವಾಗಿತ್ತು. ಎಲ್ಲಕ್ಕಿಂತ ಮಿಗಿಲಾಗಿ ದಾಲ್‌ ಬಾಟಿ ಚುರ್ಮಾ ನನಗೆ ತುಂಬ ಇಷ್ಟ’ ಎನ್ನುತ್ತಾರೆ ಈ ಚೆಲುವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.