ಪತ್ರಿಕಾಗೋಷ್ಠಿಯಲ್ಲಿ ಶೂ ಎಸೆತ

ಮಂಗಳವಾರ, ಜೂಲೈ 23, 2019
25 °C

ಪತ್ರಿಕಾಗೋಷ್ಠಿಯಲ್ಲಿ ಶೂ ಎಸೆತ

Published:
Updated:

ನವದೆಹಲಿ: ಕಾಂಗ್ರೆಸ್ ನಾಯಕ ಜನಾರ್ಧನ್ ದ್ವಿವೇದಿ ಅವರ ಪತ್ರಿಕಾಗೋಷ್ಠಿಯಲ್ಲಿ ವ್ಯಕ್ತಿಯೊಬ್ಬ ಅವರತ್ತ ತನ್ನ ಬೂಟು ಎಸೆದು ಕೆಲಕ್ಷಣ ಬೆದರಿಕೆಯ ವಾತಾವರಣ ಉಂಟು ಮಾಡಿದ ಘಟನೆ ಸೋಮವಾರ ನಡೆದಿದೆ.ದ್ವಿವೇದಿ ಅವರು ರಾಮದೇವ್ ಬಾಬಾ ಹಾಗೂ ಬಿಜೆಪಿಯನ್ನು ಟೀಕಿಸುತ್ತಿದ್ದರು. ಈ ವೇಳೆ ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆ ಬೂಟು ತೆಗೆದು ಅವರತ್ತ ಎಸೆಯಲು ಯತ್ನಿಸಿದ. ದ್ವಿವೇದಿ ಆತನನ್ನು ದೂರ ತಳ್ಳಿದರು. ನಂತರ ಅಲ್ಲಿದ್ದ ಪತ್ರಕರ್ತರು ಆತನನ್ನು ಹೊರ ಹೋಗದಂತೆ ತಡೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry