`ಪತ್ರಿಕೆಗಳು ಸಮಾಜ- ಸರ್ಕಾರದ ಕೊಂಡಿ'

ಶುಕ್ರವಾರ, ಜೂಲೈ 19, 2019
22 °C
ಪತ್ರಕರ್ತರ ಸಮ್ಮೇಳನದಲ್ಲಿ ಸಲೀಂ ಅಹ್ಮದ್ ಅಭಿಮತ

`ಪತ್ರಿಕೆಗಳು ಸಮಾಜ- ಸರ್ಕಾರದ ಕೊಂಡಿ'

Published:
Updated:

ಹಾವೇರಿ: ಸರ್ಕಾರ ಮತ್ತು ಸಮಾಜದ ಕೊಂಡಿಯಾಗಿ ಪತ್ರಿಕೆಗಳು ಕೆಲಸ ಮಾಡುತ್ತಿವೆ. ಅದೇ ಕಾರಣಕ್ಕಾಗಿ ಮಾಧ್ಯಮಗಳ ಪಾತ್ರ ಬಹುಮುಖ್ಯ ಎಂದು ಕೇಂದ್ರ ಸರಕಾರದ ನೆಹರು ಯುವ ಕೇಂದ್ರ ಸಂಘಟನೆಯ ಮಹಾ ನಿರ್ದೇಶಕ ಸಲೀಂ ಅಹ್ಮದ್ ಹೇಳಿದರು.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಭಾನುವಾರ ನಗರದ ಸರ್ಕಾರಿ ನೌಕರರ ಭವನದಲ್ಲಿ ಏರ್ಪಡಿಸಿದ್ದ ಜಿಲ್ಲಾ ಪತ್ರಕರ್ತರ ಸಮಾವೇಶ ಹಾಗೂ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.ಜನರಲ್ಲಿ ಆತ್ಮವಿಶ್ವಾಸ ಮೂಡಿಸು ವಲ್ಲಿ ಪ್ರಮುಖ ಪಾತ್ರ ವಹಿಸಿರುವ ಪತ್ರಿಕೆಗಳು, ಸಮಾಜವನ್ನು ಕಾಡುತ್ತಿ ರುವ ಭ್ರಷ್ಟಾಚಾರ, ಮೂಢನಂಬಿಕೆಗಳ ವಿರುದ್ಧ ಜನಜಾಗೃತಿ ಉಂಟು ಮಾಡು ವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂದರು.ಪತ್ರಕರ್ತರಲ್ಲಿ ಸಂಘಟನೆ ಬಲ ವಾದಾಗ ಮಾತ್ರ ಅವರ ಮೇಲೆ ನಡೆಯುವ ಶೋಷಣೆ ತಪ್ಪಿಸಲು, ಕ್ಷೇತ್ರದ ಒಳಿತಿಗಾಗಿ ಧ್ವನಿ ಎತ್ತಲು ಸಾಧ್ಯವಾಗುತ್ತದೆ. ಆಗ ಮಾತ್ರ ಪತ್ರಿಕಾ ಕ್ಷೇತ್ರದಲ್ಲಿ ದುಡಿಯುವ ವರ್ಗದ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದು ಹೇಳಿದರು.ಜನಮುಖಿಯಾಗಿ ಕಾರ್ಯ ನಿರ್ವಹಿಸುವ ಪತ್ರಿಕಾ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ತನ್ನ ಜಾಹೀರಾತು ನೀತಿಯಲ್ಲಿ ಆಮೂಲಾಗ್ರ ಬದಲಾವಣೆ ತರಬೇಕು. ಆಗ ಮಾತ್ರ ಸಣ್ಣ ಪತ್ರಿಕೆಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಬಹು ದಾಗಿದೆ ಎಂದರು.ನೋವಿಗೆ ದನಿಯಾಗಿ

`ಕೇವಲ ರಾಜಕೀಯ ನಾಯಕರ ಆರೋಪ, ಪ್ರತ್ಯಾರೋಪಗಳನ್ನು ಸುದ್ದಿ ಮಾಡುವುದಕ್ಕೆ ಗಮನ ನೀಡದೇ, ತಮ್ಮ ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಿದ ರೈತರ, ಕಲಾವಿದರ, ಕ್ರೀಡಾಪಟುಗಳ, ಕೂಲಿಕಾರ್ಮಿಕರ ಹಾಗೂ ನೊಂದವರ ಧ್ವನಿಗೆ ಧ್ವನಿಯಾಗುವಂತಹ ವರದಿ ಗಾರಿಕೆಗೆ ಪತ್ರಕರ್ತರು ಹೆಚ್ಚಿನ ಮಹತ್ವ ನೀಡಬೇಕು' ಎಂದು ಮುಖ್ಯ ಭಾಷಣ ಕಾರರಾಗಿ ಆಗಮಿಸಿದ್ದ `ಪ್ರಜಾವಾಣಿ' ನಿವೃತ್ತ ಸಹ ಸಂಪಾದಕ ಗೋಪಾಲಕೃಷ್ಣ ಹೆಗಡೆ ಹೇಳಿದರು.ರಾಜ್ಯದಲ್ಲಿರುವ ಬಹುತೇಕ ಪತ್ರಿಕೆಗಳು ರಾಜಕೀಯ ವಿಷಯಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿವೆ. ಆ ಕಾರಣಕ್ಕಾಗಿಯೇ ವರದಿಗಾರರು ಸಹ ಅಂತಹ ಸುದ್ದಿಗಳಿಗೆ ಮಹತ್ವ ನೀಡು ತ್ತಿದ್ದಾರೆ. ಈ ಪ್ರವೃತ್ತಿ ಬದಲಾಗಬೇಕು. ಆ ನಿಟ್ಟಿನಲ್ಲಿ ಪತ್ರಿಕೆಗಳು, ಸಂಪಾದಕರು ಹಾಗೂ ಪತ್ರಕರ್ತರು ಗಂಭೀರ ಚಿಂತನೆ ನಡೆಸಬೇಕಿದೆ ಎಂದರು.ಪತ್ರಿಕೆಗಳು ಪೈಪೋಟಿಯ ಭರದಲ್ಲಿ ಸಕಾರಾತ್ಮಕ ಪತ್ರಿಕೋದ್ಯಮವನ್ನು ಮರೆತಿವೆ. ಪತ್ರಿಕಾ ಸಂಸ್ಥೆಗಳ ಬೇಕು- ಬೇಡಗಳಿಗೆ ಸ್ಪಂದಿಸುವುದು ಅನಿ ವಾರ್ಯ ಸ್ಥಿತಿಯಲ್ಲಿ ಪತ್ರಕರ್ತರಿದ್ದಾರೆ. ಹೀಗಾಗಿ ರೈತರು, ಕಲಾವಿದರು, ನೊಂದವರು, ಕಾರ್ಮಿಕರು ಪತ್ರಿಕೆಗಳಿಗೆ ಪ್ರಮುಖರಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಬಹುತೇಕ ಗ್ರಾಮೀಣ ಪತ್ರಕರ್ತರಲ್ಲಿ ಅಷ್ಟೇ ಅಲ್ಲದೇ ನಮ್ಮ ಕನ್ನಡ ಭಾಷೆಯ ಪತ್ರಕರ್ತರಲ್ಲಿ ಕೀಳರಿಮೆ ಹೆಚ್ಚಾಗಿರು ತ್ತದೆ. ಇಂತಹ ಕೀಳರಿಮೆಯಿಂದ ಹೊರ ಬಂದು ಬರವಣಿಗೆಯಲ್ಲಿ ತೊಡಗಿ ಕೊಂಡಾಗ ಮಾತ್ರ ನಮ್ಮ ವರದಿಗಳು ಜನರ ಮನ ಮುಟ್ಟಲು ಸಾಧ್ಯ ಆಗುತ್ತವೆ ಎಂದ ಅವರು, ಬದುಕು ಮತ್ತು ಬರವಣಿಗೆಗೆ ವ್ಯತ್ಯಾಸ ಇರ ಬಾರದು. ಪತ್ರಕರ್ತ ಹಣ ಗಳಿಕೆಗೆ ವಾಮ ಮಾರ್ಗ ಹಿಡಿಯದೇ ಪ್ರಾಮಾ ಣಿಕತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಾಸಕ ರುದ್ರಪ್ಪ ಲಮಾಣಿ ಮಾತನಾಡಿ, ಪತ್ರಿಕೆಗಳು ಜನ ಸಮಸ್ಯೆಗಳಿಗೆ ಸ್ಪಂದಿ ಸುವ ಮೂಲಕ ಜನರ ಜೀವನಾಡಿ ಯಾಗಿ ಕೆಲಸ ಮಾಡುತ್ತಿವೆ. ಕೆಲವು ಕಡೆಗಳಲ್ಲಿ ಪತ್ರಕರ್ತರು ಅಧಿಕಾರಿ ಗಳನ್ನು ಹಾಗೂ ರಾಜಕಾರಣಿಗಳನ್ನು ಹೆದರಿಸುವ ಸುದ್ದಿಯನ್ನು ಕೇಳುತ್ತಿದ್ದೇವೆ. ಆದರೆ, ಜಿಲ್ಲೆಯ ಪತ್ರಕರ್ತರು ತಮ್ಮ ಕ್ಷೇತ್ರದ ಪಾವಿತ್ರ್ಯ ಕಾಪಾಡಿಕೊಂಡು ಬಂದಿದ್ದಾರೆ ಎಂದು ಹೇಳಿದರು.ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ, ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ  ಮಾತನಾಡಿದರು. ಹುಕ್ಕೇರಿ ಮಠದ ಸದಾಶಿವ ಶ್ರೀಗಳು ಸಾನಿಧ್ಯ ವಹಿಸಿದ್ದರು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಿಂಗಪ್ಪ ಚಾವಡಿ ಅಧ್ಯಕ್ಷತೆ ವಹಿಸಿದ್ದರು. ವಸಂತಗೌಡ ಪಾಟೀಲ ಸ್ವಾಗತಿಸಿದರು. ಪರಶುರಾಮ ಕೆರಿ, ಕಸ್ತೂರಿ ಟಿವಿ ವರದಿಗಾರ ಷಡಕ್ಷರಿ ಕಂಪುನವರ ನಿರೂಪಿಸಿದರು. ಪರಶುರಾಮ ಅಗಡಿ ವಂದಿಸಿದರು.ಸಸ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry