ಪತ್ರ- ಪಾಕ್ ಸುಪ್ರೀಂ ಆಕ್ಷೇಪ

7

ಪತ್ರ- ಪಾಕ್ ಸುಪ್ರೀಂ ಆಕ್ಷೇಪ

Published:
Updated:

ಇಸ್ಲಾಮಾಬಾದ್ (ಪಿಟಿಐ): ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ವಿರುದ್ಧದ ಭ್ರಷ್ಟಾಚಾರ ಆರೋಪಗಳಿಗೆ ಸಂಬಂಧಿಸಿದಂತೆ ಸ್ವಿಟ್ಜರ್ಲೆಂಡ್ ಸರ್ಕಾರಕ್ಕೆ ಕಳುಹಿಸಲಿರುವ ಕರಡು ಪತ್ರದಲ್ಲಿರುವ ಕೆಲವು ಅಂಶಗಳಿಗೆ ಪಾಕಿಸ್ತಾನದ ಸುಪ್ರೀಂ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ.ಜೊತೆಗೆ, ಜರ್ದಾರಿ ವಿರುದ್ಧದ ಪ್ರಕರಣಗಳ ಮರು ವಿಚಾರಣೆ ನಡೆಸಿ ಎಂದು ಸೂಚಿಸಿದ್ದ ಆದೇಶದ ಅನುಸಾರ ಕರಡು ಪತ್ರವನ್ನು ಅಕ್ಟೋಬರ್ 10ರ ಒಳಗೆ ಅಂತಿಮಗೊಳಿಸುವಂತೆಯೂ ಸರ್ಕಾರಕ್ಕೆ ಕೋರ್ಟ್ ಆದೇಶಿಸಿದೆ.

ಶುಕ್ರವಾರ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾದ ಕೂಡಲೇ, ಪಾಕಿಸ್ತಾನದ ಕಾನೂನು ಸಚಿವ ಫರೂಕ್  ನೇಕ್ ಅವರು ನ್ಯಾಯಮೂರ್ತಿ ಆಸಿಫ್ ಸಯೀದ್ ಖೋಸಾ ನೇತೃತ್ವದ ಐವರು ನ್ಯಾಯಮೂರ್ತಿಗಳನ್ನೊಳಗೊಂಡ ಪೀಠಕ್ಕೆ ಪರಿಷ್ಕೃತ ಕರಡು ಪತ್ರ ನೀಡಿದರು.ಆದರೆ, ಪತ್ರದಲ್ಲಿರುವ ಕೆಲವು ವಿಷಯಗಳ ಕುರಿತು ನ್ಯಾಯಮೂರ್ತಿಗಳು ತಮ್ಮ ಅಭಿಪ್ರಾಯಗಳನ್ನು ಕಾಯ್ದಿರಿಸಿದರು.ಜರ್ದಾರಿ ವಿರುದ್ಧದ ಪ್ರಕರಣಗಳನ್ನು ಮರು ವಿಚಾರಣೆ ನಡೆಸುವಂತೆ ಸೂಚಿಸಿ 2009ರಲ್ಲಿ ಹೊರಡಿಸಿರುವ ಆದೇಶಕ್ಕೆ ಅನುಗುಣವಾಗಿ ಈ ಪತ್ರವನ್ನು ಸಿದ್ಧಪಡಿಸಲಾಗಿಲ್ಲ ಎಂದು ಐವರು ನ್ಯಾಯಮೂರ್ತಿಗಳು ತಿಳಿಸಿದರು.ನ್ಯಾಯಾಲಯವು ಪ್ರಕರಣದ  ವಿಚಾರಣೆಯನ್ನು ಅಕ್ಟೋಬರ್ 10ಕ್ಕೆ ಮುಂದೂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry