ಶುಕ್ರವಾರ, ಫೆಬ್ರವರಿ 26, 2021
31 °C

ಪಥಸಂಚಲನದಲ್ಲಿ ಬಿಂದ್ರಾ ಬಳಗದ ಮಂದಹಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಥಸಂಚಲನದಲ್ಲಿ ಬಿಂದ್ರಾ ಬಳಗದ ಮಂದಹಾಸ

ರಿಯೊ ಡಿ ಜನೈರೊ (ಪಿಟಿಐ): ಮರಕಾನ ಕ್ರೀಡಾಂಗಣದಲ್ಲಿ ಭಾರತದ ತ್ರಿವರ್ಣ ಧ್ವಜ ಹಿಡಿದ ‘ಚಿನ್ನದ ಗುರಿ ಕಾರ’ ಅಭಿನವ್ ಬಿಂದ್ರಾ  ಮಂದಸ್ಮಿತ ರಾಗಿ ಹೆಜ್ಜೆ ಹಾಕಿದರು. ಅವರ ಹಿಂದೆ ಭಾರತ ತಂಡದ ಕ್ರೀಡಾಪಟುಗಳು ಅಭಿಮಾನಿಗಳತ್ತ ಕೈಬೀಸುತ್ತ  ನಡೆದರು.ಶನಿವಾರ ಬೆಳಗಿನ ಜಾವ (ಬ್ರೆಜಿಲ್ ಕಾಲಮಾನದ ಪ್ರಕಾರ ಶುಕ್ರವಾರ ರಾತ್ರಿ 8 ಗಂಟೆ) ನಡೆದ ಒಲಿಂಪಿಕ್ಸ್‌ನ ಉದ್ಘಾ ಟನಾ ಸಮಾರಂಭದಲ್ಲಿ  ಭಾರತ ತಂಡವು ಶಿಸ್ತಿನ ಪಥಸಂಚಲನದ ಮೂಲಕ ಗಮನ ಸೆಳೆಯಿತು.ಪಥಸಂಚಲನದಲ್ಲಿ 95ನೇ ತಂಡ ವಾಗಿ ಭಾರತದ ಬಳಗವು ಮೈದಾನ ಪ್ರವೇಶಿಸಿತು. 2008ರ ಬೀಜಿಂಗ್ ಒಲಿಂಪಿಕ್ಸ್‌ನ ಚಿನ್ನದ ಪದಕ ವಿಜೇತ ಶೂಟರ್ ಬಿಂದ್ರಾ ಧ್ಜಜ ಹಿಡಿದು ತಂಡವನ್ನು ಮುನ್ನಡೆಸಿದರು.ಇದರಲ್ಲಿ 70 ಕ್ರೀಡಾಪಟುಗಳು ಮತ್ತು 24 ಮಂದಿ ಅಧಿಕಾರಿಗಳು ಭಾಗ ವಹಿಸಿದ್ದರು. ಪುರುಷ ಕ್ರೀಡಾಪಟುಗಳು ನೀಲಿ ಬಣ್ಣದ ಕೋಟು ಮತ್ತು ಪ್ಯಾಂಟ್ ಧರಿಸಿದ್ದರು. ಮಹಿಳೆಯರು ಸೀರೆ ಮತ್ತು ಅದರ ಮೇಲೆ ನೀಲಿ ಕೋಟು ಧರಿಸಿದ್ದರು.ಏಳನೇ ಬಾರಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ 43 ವರ್ಷದ ಲಿಯಾಂಡರ್ ಪೇಸ್, ಆರ್ಟಿಸ್ಟಿಕ್ ಜಿಮ್ನಾ ಸ್ಟಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ದೇಶದ  ಮೊದಲ ವನಿತೆ ದೀಪಾ ಕರ್ಮಾಕರ್, ಬ್ಯಾಡ್ಮಿಂಟನ್ ಜೋಡಿ ಜ್ವಾಲಾ ಗುಟ್ಟಾ, ಅಶ್ವಿನಿ ಪೊನ್ನಪ್ಪ ಸೇರಿದಂತೆ ಅಥ್ಲೀಟ್‌ ಗಳು ಅಭಿಮಾನಿಗಳಿಗೆ ಕೈಬೀಸಿ ಅಭಿ ನಂದಿಸುತ್ತ ನಡೆದರು.  ತಂಡದ ಚೆಫ್ ಡಿ ಮಿಷನ್ ರಾಕೇಶ್ ಗುಪ್ತಾ ಮತ್ತು ಉಪ  ಚೆಫ್ ಡಿ  ಮಿಷನ್ ಆನಂದೇಶ್ವರ್ ಪಾಂಡೆ ಕೂಡ ಹಾಜರಿದ್ದರು.ಐರ್ಲೆಂಡ್ ಎದುರು ಪಂದ್ಯ ಇದ್ದ ಕಾರಣ ಭಾರತದ ಪುರುಷರ ಹಾಕಿ ತಂಡವು ಭಾಗವಹಿಸಿರಲಿಲ್ಲ. ಆರ್ಚರಿ, ಟೇಬಲ್ ಟೆನಿಸ್ ಮತ್ತು ವೇಟ್‌ಲಿಫ್ಟಿಂಗ್ ತಂಡಗಳ ಸದಸ್ಯರೂ  ಉದ್ಘಾಟನಾ ಸಮಾರಂಭಕ್ಕೆ ಹಾಜರಾಗಿರಲಿಲ್ಲ.ಮರ್ರೆ, ನಡಾಲ್‌ ಜನಪ್ರಿಯತೆ: ಟೆನಿಸ್ ತಾರೆಯರಾದ ಆ್ಯಂಡಿ ಮರ್ರೆ ಮತ್ತು ರಫೆಲ್ ನಡಾಲ್ ಪಥಸಂಚಲನದಲ್ಲಿ ಪ್ರಮುಖ ಆಕರ್ಷಣೆಯಾದರು.

ಇಂಗ್ಲೆಂಡ್ ಧ್ವಜ ಹಿಡಿದು ತಂಡ ವನ್ನು ಮುನ್ನಡೆಸಿದ ಆ್ಯಂಡಿ ಮರ್ರೆ ಮತ್ತು ಸ್ಪೇನ್ ತಂಡದ ಧ್ವಜಧಾರಿ ರಫೆಲ್ ನಡಾಲ್  ಅಂಗಳ ಪ್ರವೇಶಿಸುತ್ತಿದ್ದಂತೆ ಪ್ರೇಕ್ಷಕರ ಗ್ಯಾಲರಿಯಲ್ಲಿ ಸಂಚಲನ ಮೂಡಿತು. ಕೇಕೆ, ಶಿಳ್ಳೆ, ಘೋಷಣೆಗಳು ಪ್ರತಿಧ್ವನಿಸಿದವು. ಗ್ರ್ಯಾಂಡ್‌ಸ್ಲಾಮ್ ಚಾಂಪಿಯನ್ನರಿಗೆ ಅಮೋಘ ಸ್ವಾಗತ ದೊರೆಯಿತು.ಬೋಲ್ಟ್ ಇಲ್ಲದ ಜಮೈಕಾ: ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದ ಜಮೈಕಾ ತಂಡದಲ್ಲಿ ವೇಗದ ರಾಜ ಉಸೇನ್‌ ಬೋಲ್ಟ್‌ ಗೈರು ಎದ್ದು ಕಾಣುತಿತ್ತು.        60 ಕ್ರೀಡಾಪಟುಗಳ ತಂಡವು ತಮ್ಮ ದೇಶದ ಧ್ವಜಗಳನ್ನು ಹಿಡಿದು, ಪ್ರೇಕ್ಷಕರಿ ಗೆ ‘ಗಾಳಿಮುತ್ತು’ ಎಸೆಯುತ್ತ ಸಾಗಿದರು.ಚಾಂಪಿಯನ್ ತಂಡದ ಸೊಬಗು: ಲಂಡನ್ ಒಲಿಂಪಿಕ್ಸ್‌ನಲ್ಲಿ ಅತಿ ಹೆಚ್ಚು ಪದಕ ಗಳಿಸಿದ್ದ ಅಮೆರಿಕ ತಂಡವು ‘ಚಿನ್ನದ ಮೀನು’ ಮೈಕೆಲ್ ಪೆಲ್ಪ್ಸ್‌ ಅವರ ಮುಂದಾಳತ್ವದಲ್ಲಿ ಗಮನ ಸೆಳೆಯಿತು.500 ಕ್ರೀಡಾಪಟುಗಳು ಇರುವ ಬಲಿಷ್ಠ ತಂಡ ಇದಾಗಿದೆ. ಪಥಸಂಚಲ ನದಲ್ಲಿ ಭಾಗವಹಿಸಿದ್ದ ಅಥ್ಲೀಟ್‌ಗಳು ನೀಲಿ ಕೋಟು ಕೆಂಪು, ಬಿಳಿ ಮತ್ತು ಕಪ್ಪು ಬಣ್ಣಗಳ ಪಟ್ಟೆಗಳಿರುವ ಟೀಶರ್ಟ್ ಹಾಗೂ ಬಿಳಿ ಪ್ಯಾಂಟ್‌ಗಳನ್ನು ಧರಿಸಿದ್ದರು.ದಾಖಲೆ ಬರೆದ ಝಹ್ರಾ ನೆಮಾತಿ: ಇರಾನ್ ದೇಶದ ತಂಡಕ್ಕೆ ಇದೇ ಮೊದಲ ಬಾರಿ ಮಹಿಳಾ ಕ್ರೀಡಾಪಟು ವೊಬ್ಬರು ಧ್ವಜಧಾರಿಯಾದರು.

ಆರ್ಚರಿಪಟು ಝಹ್ರಾ ನೆಮಾತಿ ಅವರು ತಂಡವನ್ನು ಮುನ್ನಡೆಸಿದರು. ಪ್ಯಾರಾಲಿಂಪಿಕ್ ಕ್ರೀಡಾಪಟುವಾಗಿರುವ ಅವರು ಗಾಲಿಕುರ್ಚಿಯಲ್ಲಿ ಕುಳಿತು ಇರಾನ್ ದೇಶದ ಧ್ವಜ ಹಿಡಿದು ತಂಡ ದೊಂದಿಗೆ ಮೈದಾನ ಪ್ರವೇಶಿಸಿದರು. ಕೆಲವು ವರ್ಷಗಳ ಹಿಂದೆ  ಇರಾನ್‌ನಲ್ಲಿ ಮಹಿಳೆಯರು ಕ್ರೀಡೆಯಲ್ಲಿ ಭಾಗವಹಿಸು ವುದಕ್ಕೂ ನಿರ್ಬಂಧವಿತ್ತು. ಇದೀಗ  31 ವರ್ಷದ ಝಹ್ರಾ ಅವರು ಇರಾನ್ ತಂಡದ ಮೊದಲ ಧ್ವಜಧಾರಿಯೆಂಬ ಹೆಗ್ಗಳಿಕೆಗೆ ಪಾತ್ರರಾದರು.ಅವರು  ಮೂಲತಃ ಟೇಕ್ವಾಂಡೂ ಪಟು. ಆದರೆ ಕೆಲವು ವರ್ಷಗಳ ಹಿಂದೆ ಕಾರು ಅಪಘಾತದಲ್ಲಿ ಅವರು ಕಾಲು ಕಳೆದುಕೊಂಡರು. ನಂತರ ಆರ್ಚರಿ ಯಲ್ಲಿ ತಮ್ಮ ಪ್ರತಿಭೆ ಮೆರೆದರು. 2012ರ ಲಂಡನ್ ಪ್ಯಾರಾಲಿಂಪಿಕ್ಸ್‌ನಲ್ಲಿ ಮಹಿಳೆ ಯರ ರಿಕರ್ವ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದರು. 2015 ಏಷ್ಯನ್ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಜಯಿಸಿದ್ದ ಅವರು ರಿಯೊ ಪ್ಯಾರಾಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದರು. ‘ನನ್ನ ಗುರಿ ಸ್ಪಷ್ಟವಾಗಿದೆ. ಶ್ರೇಷ್ಠ ಫಲಿತಾಂಶ ಸಾಧನೆ ಮಾಡುತ್ತೇನೆ. ನನ್ನ ಕುಟುಂಬ ಮತ್ತು ಆತ್ಮೀಯರು ಖುಷಿ ಪಡುವಂತೆ ಮಾಡುತ್ತೇನೆ. ನಾನು ಶಕ್ತಿ ಶಾಲಿಯಾಗಿದ್ದೇನೆ ಎಂದು ತೋರಿಸಿ ಕೊಡುತ್ತೇನೆ’ ಎಂದು ಝಹ್ರಾ ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.