ಪದವಿ ಉಪನ್ಯಾಸಕರ ನೇಮಕಾತಿಗೆ ತಡವೇಕೆ?

7

ಪದವಿ ಉಪನ್ಯಾಸಕರ ನೇಮಕಾತಿಗೆ ತಡವೇಕೆ?

Published:
Updated:

ಪದವಿ ಉಪನ್ಯಾಸಕರ 1500 ಹುದ್ದೆಗಳು ಖಾಲಿ ಇವೆ ಎಂದು ಹೇಳುತ್ತಾ ಬಂದಿರುವ ಸರ್ಕಾರ ಮತ್ತು  ಕೆಪಿಎಸ್‌ಸಿ, ಹುದ್ದೆಗಳನ್ನು ತುಂಬಲು ಗಮನ ಹರಿಸದೇ ಇರುವುದು ಪದವಿ ಉಪನ್ಯಾಸಕರ ಹುದ್ದೆಗೆ ಅರ್ಹತೆ ಇರುವ ಅಭ್ಯರ್ಥಿಗಳ ಆತಂಕಕ್ಕೆ ಕಾರಣವಾಗಿದೆ.ಪದವಿಪೂರ್ವ ಉಪನ್ಯಾಸಕರ ಹುದ್ದೆಗೆ ಈಗಾಗಲೇ ಪರೀಕ್ಷೆ ನಡೆಸಿ ಹುದ್ದೆ ತುಂಬುವ ಪ್ರಕ್ರಿಯೆಗಳು ನಡೆಯುತ್ತಲಿವೆ. ಆದರೆ ಪದವಿ ಉಪನ್ಯಾಸಕರ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರ್ಕಾರ ಹಾಗೂ ಕೆಪಿಎಸ್‌ಸಿ ಇದುವರೆಗೂ ಅಧಿಸೂಚನೆ ಹೊರಡಿಸದೇ ಇರುವುದು ಸಾವಿರಾರು ನಿರುದ್ಯೋಗಿಗಳ ಭವಿಷ್ಯ ಅತಂತ್ರ ಸ್ಥಿತಿ ತಲುಪಿವೆ. ಈಗಾಗಲೇ ಎಸ್.ಎಲ್.ಇ.ಟಿ,  ಎನ್.ಇ.ಟಿ, ಎಂ.ಫಿಲ್, ಪಿಎಚ್.ಡಿ ಮುಗಿಸಿರುವ ಸಾವಿರಾರು ಅಭ್ಯರ್ಥಿಗಳು ಪದವಿ ಉಪನ್ಯಾಸಕರ ನೇಮಕಾತಿ ಅಧಿಸೂಚನೆಗೆ ಕಾಯುತ್ತಿದ್ದಾರೆ.  ಇನ್ನೂ ಕೆಲವರ ವಯೋಮಿತಿ ದಿನಕಳೆದಂತೆ ಮೀರುತ್ತಿದೆ. ಪದವಿಪೂರ್ವ ಉಪನ್ಯಾಸಕರ ಅರ್ಜಿ ಕರೆದು ಪರೀಕ್ಷೆ ನಡೆಸಿದ ಸರ್ಕಾರ,  ಪದವಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಕರೆಯದೆ ತಾರತಮ್ಯ ಎಸಗಿರುವುದು ಸರಿಯಲ್ಲ.  ಉನ್ನತ ಶಿಕ್ಷಣಸಚಿವರು ಶೀಘ್ರ ಅಧಿಸೂಚನೆ ಹೊರಡಿಸುತ್ತೇವೆ ಎಂದು ಹೇಳುತ್ತಲೇ ಇದ್ದಾರೆ.  ಆದರೆ ಇದರ ಬಗ್ಗೆ ಯಾವುದೇ ಪ್ರಕ್ರಿಯೆ ನಡೆಯದೇ ಇರುವುದು ಅಭ್ಯರ್ಥಿಗಳಲ್ಲಿ ಗೊಂದಲವುಂಟು ಮಾಡಿದೆ.ಇನ್ನಾದರೂ ಸಾವಿರಾರು ನಿರುದ್ಯೋಗಿಗಳಿಗೆ ನ್ಯಾಯ ಒದಗಿಸುವ ಸಲುವಾಗಿ ಸರ್ಕಾರ ಹಾಗೂ ಕೆಪಿಎಸ್‌ಸಿ ಶೀಘ್ರವಾಗಿ ಪದವಿ ಉಪನ್ಯಾಸಕರ ಭರ್ತಿಗೆ ಅಧಿಸೂಚನೆ ಹೊರಡಿಸಬೇಕು. 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry