ಪದವಿ ಕಾಲೇಜಿಗೆ ಮೂಲಸೌಕರ್ಯ ಅಭಿವೃದ್ಧಿ: ವಾಲ್ಮೀಕ

7

ಪದವಿ ಕಾಲೇಜಿಗೆ ಮೂಲಸೌಕರ್ಯ ಅಭಿವೃದ್ಧಿ: ವಾಲ್ಮೀಕ

Published:
Updated:

ಚಿತ್ತಾಪುರ: ನಗರದಲ್ಲಿರುವ ಸರ್ಕಾರಿ ಪದವಿ ಕಾಲೇಜಿಗೆ ಬೇಕಾದ ಕುಡಿವ ನೀರು, ಕಟ್ಟಡಕ್ಕೆ ಕಾಂಪೌಂಡ್ ಗೋಡೆ ಸೇರಿದಂತೆ ವಿವಿಧ ಮೂಲಭೂತ ಸೌಕರ್ಯ ಕಲ್ಪಿಸಿಕೊಡುತ್ತೇನೆ ಎಂದು ಶಾಸಕ ವಾಲ್ಮೀಕ ನಾಯಕ ಭರವಸೆ ನೀಡಿದರು.ಸ್ಥಳೀಯ ಸರ್ಕಾರಿ ಪದವಿ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ 2011-12ನೇ ಸಾಲಿನ ಶೈಕ್ಷಣಿಕ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನೆ ಮತ್ತು ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಕಾಲೇಜಿನಲ್ಲಿ ಪ್ರತಿಭಾವಂತ ಉಪನ್ಯಾಸಕರಿದ್ದಾರೆ. ವಿದ್ಯಾರ್ಥಿಗಳು ಕಾಲೇಜು ಜೀವನವನ್ನು ಹಾಳು ಮಾಡಿಕೊಳ್ಳದೆ ಶ್ರದ್ಧೆಯಿಂದ ಅಧ್ಯಾಯನ ಮಾಡಬೇಕು. ಪ್ರತಿಭಾವಂತ ಉಪನ್ಯಾಸಕರ ಜ್ಞಾನವನ್ನು ಸರಿಯಾಗಿ ಸದುಪಯೋಗ ಮಾಡಿಕೊಳ್ಳಬೇಕು. ಶಿಕ್ಷಣದಲ್ಲಿ ಗುರುತರವಾದ ಸಾಧನೆ ಮಾಡಿ ಸಮಾಜ ಮೆಚ್ಚುವಂತೆ ಆಗಬೇಕು ಎಂದು ಕಿವಿ ಮಾತು ಹೇಳಿದರು.ಮುಖ್ಯ ಅತಿಥಿಯಾಗಿದ್ದ ಚಂದ್ರಶೇಖರ ಅವಂಟಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಎಸ್. ಅವರಾಧಿ ಮಾತನಾಡಿದರು. ವೇದಿಕೆಯಲ್ಲಿ ದೈಹಿಕ ಶಿಕ್ಷಣ ಬೋಧಕ ಲಕ್ಷ್ಮೀಕಾಂತ ಶಿರೊಳ್ಳಿ, ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡಾ. ಚಂದ್ರಕುಮಾರ ಸೇಡಂಕರ್, ಎನ್.ಎಸ್.ಎಸ್. ಅಧಿಕಾರಿ ಡಾ. ವಿಜಯಕುಮಾರ ಸಾಲಿಮನಿ, ಉಪನ್ಯಾಸಕ ಡಾ. ಅನೀಲಕುಮಾರ ಹಾಲು ಅತಿಥಿಗಳಾಗಿದ್ದರು.ಸುಧಾ ಸಂಗಡಿಗರು ಸ್ವಾಗತ ಗೀತೆ ಹಾಡಿದರು. ರಾಜೇಶ ಅಜಬಸಿಂಗ್ ಸ್ವಾಗತಿಸಿದರು. ಡಾ. ಶರಣಪ್ಪಾ ಸೈದಾಪುರ ನಿರೂಪಿಸಿದರು. ಪಂಡಿತ್ ಬಿ.ಕೆ ವಂದಿಸಿದರು.ಸಮುದಾಯದತ್ತ ಶಾಲೆ

ಗುಲ್ಬರ್ಗ: ತಾಲ್ಲೂಕಿನ ಅವರಾದ (ಬಿ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಸಮುದಾಯದತ್ತ ಶಾಲೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಸುರೇಶ ಜಾಧವ, ಸುರೇಶ ದೊಡ್ಮನಿ ವಿಜಯಲಕ್ಷ್ಮಿ ರೆಡ್ಡಿ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು ಎಂದು ಮುಖ್ಯಗುರು ಶಬ್ಬೀರ್ ಅಹ್ಮದ್ ಹಾಗರಗುಂಡಿಗಿ ತಿಳಿಸಿದ್ದಾರೆ.ರಾಜ್ಯ ಮಟ್ಟಕ್ಕೆ ಆಯ್ಕೆ

ಗುಲ್ಬರ್ಗ: ತಾಲ್ಲೂಕಿನ ನಾಗೂರ ಪ್ರೌಢಶಾಲೆಯ ವಿದ್ಯಾರ್ಥಿ ರವಿಕುಮಾರ ಈಚೆಗೆ ನಡೆದ ಜಿಲ್ಲಾ ಮಟ್ಟದ ಉದ್ದ ಜಿಗಿತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ.ವಿದ್ಯಾರ್ಥಿಯ ಈ ಸಾಧನೆಗೆ ಶಾಲೆಯ ಮುಖ್ಯಗುರು ಹಾಗೂ ಸಿಬ್ಬಂದಿ ವರ್ಗ  ಅಭಿನಂದಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry