ಬುಧವಾರ, ಏಪ್ರಿಲ್ 14, 2021
23 °C

ಪದಾಧಿಕಾರಿಗಳ ದಿಕ್ಕು ತಪ್ಪಿಸಿದ ಸಂಘಟಕರು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಿಂಗಸುಗೂರ: ಸಿಪಿಐ(ಎಂ) ಸಂಘಟನೆ ಮಂಗಳವಾರ ಕರೆನೀಡಿದ್ದ ಪ್ರತಿಭಟನಾ ರ್ಯಾಲಿಗೆ ತಾಲ್ಲೂಕಿನ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾ ರಿಗಳು ತಮ್ಮ ಕಾರ್ಯಕರ್ತರೊಂದಿಗೆ ಆಗಮಿಸಿದ್ದರು. ಆದರೆ, ಆಯಾ ಸಂಘ ಟಕರು ಕಾರ್ಯಕರ್ತರಿಗೆ ನೀಡಿದ್ದ ಭರವಸೆಗಳು ಹುಸಿಯಾ ಗಿದ್ದನ್ನು ಕಂಡು ತಮ್ಮ ಸಂಘಟನೆ ಮುಖಂಡ ರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗಗಳು ಜರುಗಿದವು. ಸಂಘಟ ಕರು ಕೂಡ ತಮಗೆ ಈ ಪ್ರತಿಭಟನೆ ಮೂಲ ಉದ್ದೇಶ ಅರ್ಥವಾಗಲಿಲ್ಲ ಎಂದು ಗೊಣಗುತ್ತಿರುವುದು ಕೇಳಿಬಂತು.ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ, ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ, ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ರಾಜ್ಯ ದೇವದಾಸಿ ಮಹಿಳಾ ವಿಮೋಚನಾ ಸಂಘ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ, ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ಸೇರಿದಂತೆ ಇತರೆ ಸಂಘನೆಗಳು ತಮ್ಮ ಕಾರ್ಯಕರ್ತರ ವಿವಿಧ ಬೇಡಿಕೆಗಳ ಈಡೇರಿಕೆ ಕುರಿತು ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ಗಮನ ಸೆಳೆಯುವ ಮಹತ್ವಾಕಾಂಕ್ಷಿ ಹೊಂದಿದ್ದರು.ಪ್ರತಿಯೊಂದು ಸಂಘಟನೆಯವರು 10-15 ಬೇಡಿಕೆಗಳ ಮನವಿಯನ್ನು ಸಿದ್ಧಪಡಿಸಿಕೊಂಡು ಬಂದಿದ್ದರು. ಆದರೆ, ಪ್ರತಿಭಟನೆ ಸಂದರ್ಭದಲ್ಲಿ ಕೇವಲ ಬೆಲೆ ಏರಿಕೆ, ಭ್ರಷ್ಟಾಚಾರ, ಉದ್ಯೋಗ ಖಾತ್ರಿ ಯೋಜನೆ ಕುರಿತಾದ ವಾಗ್ವಾದ, ಪ್ರಶ್ನೆಗಳ ಸುರಿಮಳೆ ಕಂಡ ಬಹುತೇಕ ಮಹಿಳಾ ಕಾರ್ಯಕರ್ತರು ಪ್ರತಿಭಟನಾ ಸ್ಥಳದಿಂದ ಅನತಿ ದೂರದಲ್ಲಿ ಸಂಘಟಕರಿಗೆ ಹಿಡಿಶಾಪ ಹಾಕುತ್ತ ಕುಳಿತಿದ್ದರು. ತಮ್ಮ ಹಿಂಬಾಲಕರಿಗೆ ಕೆಲಸ ಮಾಡಿಸುವ ಭರವಸೆ ನೀಡಿದಂತೆ ಅರ್ಜಿಗಳನ್ನು ಗುಜರಾಯಿಸು ತ್ತಿರುವುದು ಕಂಡುಬಂದಿತು.ಸಂಘಟಕರು ಅಧಿಕಾರಿಗಳೊಂದಿಗೆ ವಾಗ್ವಾದದಲ್ಲಿ ತೊಡಗಿರುವ ಸಂದರ್ಭದಲ್ಲಿ ಬಹುತೇಕ ಕಾರ್ಯ ಕರ್ತರು ಅಲ್ಲಲ್ಲಿ ಈ ಪ್ರತಿಭಟನೆಗೂ, ತಮಗೂ ಸಂಬಂಧವೆ ಇಲ್ಲದವರಂತೆ ಕುಳಿತುಕೊಂಡಿದ್ದರು. ಪ್ರಜಾವಾಣಿ ಈ ಕುರಿತು ಮಾತನಾಡಿಸಿದಾಗ ತಮಗೆ ಏನೆಲ್ಲಾ ಸರ್ಕಾರದ ಯೋಜನೆಗಳ ಲಾಭ ದೊರಕಿಸಿಕೊಡುತ್ತೇವೆ. ಅಧಿಕಾರಿ ಗಳನ್ನು ಭೇಟಿ ಮಾಡಿಸುತ್ತೇವೆ ಎಂದು ಭರವಸೆ ನೀಡಿ ಕರೆ ತಂದಿದ್ದಾರೆ. ಇಲ್ಲಿ ನೋಡಿದರೆ ತಮಗೆ ಸಂಬಂಧಿಸಿ ಯಾವೊಂದು ಬೇಡಿಕೆಗಳ ಧ್ವನಿ ಎತ್ತುತ್ತಿಲ್ಲ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.